ಇನ್ನು 5, 8 ನೇ ತರಗತಿಯಲ್ಲಿ ಫೇಲ್ ಮಾಡಬಹುದು!

ಗುರುವಾರ, 3 ಆಗಸ್ಟ್ 2017 (11:36 IST)
ನವದೆಹಲಿ: 10 ನೇ ತರಗತಿಯವರೆಗೆ ಫೇಲಾಗುವ ಭಯವಿಲ್ಲ ಎಂದು ಆರಾಮವಾಗಿದ್ದ ವಿದ್ಯಾರ್ಥಿಗಳು ಇನ್ನು ಹುಷಾರಾಗಿರಬೇಕು. ಇನ್ನು 5 ಮತ್ತು 8 ನೇ ತರಗತಿಯಲ್ಲೂ ಫೇಲ್ ಮಾಡಲು ಸರ್ಕಾರ ಅವಕಾಶ ನೀಡಿದೆ.

 
‘ಅನುತ್ತೀರ್ಣ ನಿರ್ಬಂಧ ನೀತಿ’ ರದ್ದು ಪಡಿಸಲು ತೀರ್ಮಾನಿಸಿರುವ ಕೇಂದ್ರ ಸಂಪುಟ ಹೊಸ ನೀತಿಗೆ ಒಪ್ಪಿಗೆ ನೀಡಿದೆ. ಹೀಗಾಗಿ 5 ಮತ್ತು 8 ನೇ ತರಗತಿಯಲ್ಲೂ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದಾಗಿದೆ.

ಆದರೆ ಇದಕ್ಕೆ ಮೇ ಅಥವಾ ಜೂನ್ ನಲ್ಲಿ ಪೂರಕ ಪರೀಕ್ಷೆ ನಡೆಸಲು ಸೂಚಿಸಿದೆ. ಪೂರಕ ಪರೀಕ್ಷೆಯಲ್ಲಿ ಪಾಸಾದರೆ ಮುಂದಿನ ವರ್ಷವೇ ಮುಂದಿನ ತರಗತಿಗೆ ಅರ್ಹತೆ ಪಡೆಯಬಹುದು. ಅನುತ್ತೀರ್ಣ ಪದ್ಧತಿಯಲ್ಲಿ ತಿದ್ದುಪಡಿ ತಂದಿರುವುದರಿಂದ ಇನ್ನು, ಆರ್ ಟಿಇ ನಿಯಮದಲ್ಲೂ ಬದಲಾವಣೆಯಾಗಲಿದೆ.

ಇದನ್ನೂ ಓದಿ.. ವಿವಾದದಲ್ಲಿ ಶಿವರಾಜ್ ಕುಮಾರ್ ಸಿನಿಮಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ