ಹೀಗೆ ಪೋನ್ ಸಂದೇಶದ ಮೂಲಕ ಪತ್ನಿಗೆ ತಲಾಕ್ ನೀಡಿರುವ ವ್ಯಕ್ತಿ ಅಬ್ದುಲ್ ಅಖಿಲ್ (25) ಹೈದರಾಬಾದಿನ ಮೊಘಲ್‌ಪುರದ ನಿವಾಸಿಯಾಗಿದ್ದು 2015ರಲ್ಲಿ ಮಲಕ್‌ಪೇಟ್‌ನ 20 ವರ್ಷದ ಮೆಹರಿನ್‌ನೂರ್ ಜತೆ ವಿವಾಹವಾಗಿದ್ದ. ಮದುವೆಯಾದ ಬಳಿಕ ಉದ್ಯೋಗದ ನಿಮಿತ್ತ ಅಮೇರಿಕಾಕ್ಕೆ ಮರಳಿದ ಆತ ಕಳೆದ ತಿಂಗಳು ಪತ್ನಿಗೆ ವಾಟ್ಸಪ್ ಮೂಲಕ ಪತ್ನಿಗೆ ತಲಾಕ್ ನೀಡಿದ್ದೇನೆ ಎಂದು ವಾದಿಸುತ್ತಿದ್ದಾನೆ , ಹೈದರಾಬಾದ್‌ನಲ್ಲಿ ತನ್ನ ತಂದೆ ತಾಯಿಯ ಮನೆಯಿಂದ ಹೊರಬಿದ್ದು ಹೋಗು ಎಂದು ಒತ್ತಡ ಹೇರುತ್ತಿದ್ದಾನೆ.
ಪತಿಯ ಸಂದೇಶ ಪಡೆದು ಆಘಾತಗೊಂಡಿರುವ ಪೀಡಿತೆಗೆ ಆಕೆಯ ಅತ್ತೆ-ಮಾವ, ನಾದಿನಿ ಸಹ ಮನೆ ಬಿಟ್ಟು ಹೋಗುವಂತೆ ಕಿರುಕುಳ ನೀಡುತ್ತಿದ್ದಾರಂತೆ. ಮತ್ತೀಗ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ನೂರ್ ನನಗೆ ಪತಿ ತಲಾಕ್ ನೀಡಿಲ್ಲ. ಅಂತಹ ಯಾವ ಸಂದೇಶವೂ ನನಗೆ ಬಂದಿಲ್ಲ ಎನ್ನುತ್ತಿದ್ದಾಳೆ.
ಮೊಘಲ್‌ಪುರ ಪೊಲೀಸರು ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಬ್ದುಲ್ ಅಷ್ಟೇ ಅಲ್ಲ, ಆತನ ಸಹೋದರ ಸಯ್ಯದ್ ಫಯಾಜುದ್ದೀನ್ ಹುಸೇನ್ ಕೂಡ ತನ್ನ ಪತ್ನಿಗೆ ತಲಾಕ್ ನೀಡಲು ತಯಾರಾಗಿದ್ದು, ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಆತನ ಪತ್ನಿ ಹಿನಾ ಫಾತಿಮಾ ಕಳೆದೆರಡು ದಿನಗಳಿಂದ ಪತಿಯ ಮನೆ ಮುಂದೆ ಧರಣಿ ನಡೆಸುತ್ತಿದ್ದಾಳೆ.