ಒಡಿಶಾ ರೈಲು ದುರಂತ : ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

ಸೋಮವಾರ, 5 ಜೂನ್ 2023 (08:52 IST)
ನವದೆಹಲಿ : ಬರೋಬ್ಬರಿ 275 ಮಂದಿಯ ಜೀವ ಬಲಿ ಪಡೆದ ಬಾಲಸೋರ್ ತ್ರಿವಳಿ ರೈಲು ದುರಂತ ಪ್ರಕರಣ ಇಡೀ ದೇಶವನ್ನೆ ಆಘಾತಕ್ಕೀಡು ಮಾಡಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪೋಸ್ಟ್ ಮಾರ್ಟಂ ನಡೆಯುತ್ತಿದ್ದು, ಘಟನೆಗೆ ಅಸಲಿ ಕಾರಣಗಳೇನು ಎಂಬುದು ಒಂದೊಂದಾಗಿಯೇ ಬಯಲಿಗೆ ಬರುತ್ತಿದೆ. ದೇಶ ಕಂಡ 3ನೇ ಅತಿ ದೊಡ್ಡ ರೈಲು ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಸಿಗ್ನಲಿಂಗ್ ಮತ್ತು ಎಲೆಕ್ಟ್ರಾನಿಕ್ ಇಂಟರ್ಲಾಕ್ ಸಿಸ್ಟಮ್ ಕಾರಣದಿಂದ ಈ ಘೋರ ದುರಂತ ಸಂಭವಿಸಿದೆ ಎಂಬ ಮಾಹಿತಿ ರೈಲ್ವೇ ಇಲಾಖೆಯ ಪ್ರಾಥಮಿಕ ವರದಿಯಲ್ಲಿದೆ. ಮುಖ್ಯವಾದ ಹಳಿ ಸರಿಯಿದ್ದರೂ ಇದ್ದಕ್ಕಿಂದ್ದಂತೆ ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್ಗೆ ಕೋರಮಂಡಲ್ ಎಕ್ಸ್ಪ್ರೆಸ್ ಬಂದಿದ್ದು ಯಾಕೆ? ಇಂಟರ್ಲಾಕ್ ಸಿಸ್ಟಂ ಬದಲಾಗಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಹಲವು ಅನುಮಾನಗಳು ಎದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಹೆಗಲಿಗೆ ವಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ