ಒಮಿಕ್ರೋನ್ ಸ್ಫೋಟ: ಒಂದೇ ದಿನದಲ್ಲಿ 122 ಕೇಸ್!

ಶನಿವಾರ, 25 ಡಿಸೆಂಬರ್ 2021 (14:08 IST)
ನವದೆಹಲಿ :  ಅತಿ ಅಪಾಯಕಾರಿ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 122 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿವೆ.

ಇದು ಈವರೆಗೆ ಒಂದು ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆ. ಇದರೊಂದಿಗೆ ದೇಶದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ.

ಈವರೆಗೆ ಮಹಾರಾಷ್ಟ್ರದಲ್ಲಿ 88, ದೆಹಲಿಯಲ್ಲಿ 67, ತೆಲಂಗಾಣದಲ್ಲಿ 38, ತಮಿಳುನಾಡಿನಲ್ಲಿ 34 ಮತ್ತು ಗುಜರಾತಲ್ಲಿ 30 ಕೇಸ್ ದೃಢಪಟ್ಟಿವೆ.

ಹೀಗಾಗಿ ಅಮೆರಿಕ, ಬ್ರಿಟನ್ನಂತೆ ಭಾರತದಲ್ಲೂ ಒಮಿಕ್ರೋನ್ ಇನ್ನೊಂದು ಅಲೆ ಸೃಷ್ಟಿಸುವ ಭೀತಿ ಪ್ರಾರಂಭವಾಗಿದೆ.6650 ಹೊಸ ಕೇಸು:  ಈ ನಡುವೆ ಒಮಿಕ್ರೋನ್ ಪ್ರಕರಣ ಹೆಚ್ಚಳ ಕಂಡರೂ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ,

ಒಮಿಕ್ರೋನ್ ಕೇಸು ಸೇರಿ 6,650 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 374 ಮಂದಿ (ಕೇರಳದ ಹಳೆಯ ಸಾವುಗಳ ಲೆಕ್ಕವೂ ಸೇರಿ) ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 77,516ಕ್ಕೆ ತಗ್ಗಿದೆ. ಇದು 2020ರ ಮಾಚ್ರ್ ನಂತರದ ಅತಿ ಕನಿಷ್ಠ ಸಂಖ್ಯೆಯಾಗಿದೆ.

ಈವರೆಗೆ ದೇಶದ 3.58 ಕೋಟಿ ಜನರಿಗೆ ಸೋಂಕು ತಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,79,133ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.42 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.98.40ರಷ್ಟಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.0.57ರಷ್ಟಿದೆ. ಈ ನಡುವೆ ಈವರೆಗೆ 140.31 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ