ಓಮಿಕ್ರಾನ್ ಸೋಂಕು ಪ್ರಸರಣ ತೀವ್ರ ಹೆಚ್ಚಳ?

ಗುರುವಾರ, 16 ಡಿಸೆಂಬರ್ 2021 (12:41 IST)
ಹೊಸದಿಲ್ಲಿ : ಕೊರೊನಾದ ಹೊಸ ರೂಪಾಂತರಿ ವೈರಾಣು 'ಓಮಿಕ್ರಾನ್' ಸೋಂಕಿನ ಪ್ರಕರಣಗಳು ಜನವರಿ, ಫೆಬ್ರವರಿ ತಿಂಗಳಿನಲ್ಲಿ ದೇಶಾದ್ಯಂತ ತೀವ್ರವಾಗಿ ಏರಿಕೆ ಕಾಣುವ ಸಾಧ್ಯತೆಯಿದೆ

ಎಂದು ಹೇಳಿರುವ ಕೇಂದ್ರ ಸರಕಾರವು, ಹೊಸ ರೂಪಾಂತರಿಯು ಡೆಲ್ಟಾದಷ್ಟು ತೀವ್ರವಾಗಿರುವುದಿಲ್ಲ ಎಂದು ತಿಳಿಸಿದೆ.

''ಓಮಿಕ್ರಾನ್ ತೀವ್ರವಾಗಿ ಪ್ರಸರಣ ಹೊಂದಿದರೂ ತೀರಾ ಅಪಾಯಕಾರಿಯಲ್ಲ. ಡೆಲ್ಟಾಗಿಂತಲೂ ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಈ ಸೋಂಕು ಉಂಟುಮಾಡಲಿದೆ. ಏಕೆಂದರೆ ಸಾಂಕ್ರಾಮಿಕ ಪ್ರಸರಣದ ಅಂತ್ಯ ಭಾಗದಲ್ಲಿನಾವಿದ್ದೇವೆ,'' ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ಸಾಂಕ್ರಾಮಿಕದ ಅಂತ್ಯಭಾಗದಲ್ಲಿ ಪ್ರಸರಣದ ವೇಗ ವಿಪರೀತ ಇರುತ್ತದೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಪ್ರಕರಣ ದಾಖಲಾದ ಬಳಿಕ ಸದ್ಯ 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಓಮಿಕ್ರಾನ್ ವ್ಯಾಪಿಸಿದೆ. ಇಂಥ ವೇಗದ ಪ್ರಸರಣವನ್ನು ಹಿಂದೆಂದೂ ಕಂಡಿಲ್ಲ.

ಸದ್ಯ ಡೆಲ್ಟಾ ಸೋಂಕಿತರೇ ವಿಶ್ವಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಎರಡು ತಿಂಗಳಲ್ಲಿ ಓಮಿಕ್ರಾನ್ ಸೋಂಕಿತರು ಗರಿಷ್ಠ ಸಂಖ್ಯೆ ಮುಟ್ಟುತ್ತಾರೆ. ಹೆಚ್ಚೆಚ್ಚು ಜನರು ಕೊರೊನಾ ನಿರೋಧಕ ಲಸಿಕೆ ಪಡೆದಿರುವ ಕಾರಣ ಓಮಿಕ್ರಾನ್ ಸೋಂಕಿನಿಂದಾಗುವ ಅನಾರೋಗ್ಯದ ಗಂಭೀರತೆ ಕಡಿಮೆಯಿದೆ.

ಎರಡೂ ಡೋಸ್ ಲಸಿಕೆಯನ್ನು ಪ್ರತಿ ಪ್ರಜೆಗೆ ನೀಡುವತ್ತ ಎಲ್ಲ ರಾಷ್ಟ್ರಗಳು ಗಮನಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂತ್ರ್ಯಎಚ್ಒ) ಹೇಳಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ