ಉರಿ ಸೇನಾನೆಲೆಯಲ್ಲಿ ನಡೆಸಿದ ಭೀಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೈನಿಕರು ಸೀಮಿತ ದಾಳಿ ನಡೆಸಿ ಮಾರಣಹೋಮ ನಡೆಸಿದರೂ ಉಗ್ರರು ಮತ್ತೆ ದುಸ್ಸಾಹಸ ಮೆರೆದಿದ್ದಾರೆ. ಮತ್ತೊಮ್ಮೆ ಸೇನಾ ಶಿಬಿರಗಳ ಮೇಲೆ ಉಗ್ರರು ದಾಳಿ ನಡೆಸಿದ್ದು ಎರಡು ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಬಿಎಸ್ಎಫ್ ಯೋಧ ಹುತಾತ್ಮನಾಗಿದ್ದಾನೆ. ಇಬ್ಬರು ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಲಾಗಿದೆ.