ದೇಶದೆಲ್ಲೆಡೆ ಎಟಿಎಂಗಳ ಮುಂದೆ 'ನೋ ಕ್ಯಾಶ್' ಬೋರ್ಡ್ ನೇತುಹಾಕಿರುವುದೇ ಕಂಡು ಬರುತ್ತಿದೆ
ಬ್ಯಾಂಕ್‌ಗಳ ಮುಂದೆ, ಎಟಿಎಂಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೂ ಎಲ್ಲರಿಗೂ ಹಣ ಸಿಗುತ್ತಿಲ್ಲ. ಸಿಕ್ಕರೂ ಬ್ಯಾಂಕ್‌ಗಳಲ್ಲಿ ನೀಡುತ್ತಿರುವುದು 2,000 ರೂಪಾಯಿ ನೋಟುಗಳಾಗಿರುವುದರಿಂದ ಚಿಲ್ಲರೆಗಾಗಿ ಜನರು ಪರದಾಡುತ್ತಿದ್ದಾರೆ.
ಕರ್ನಾಟಕದಾದ್ಯಂತ ಒಟ್ಟು 16,929 ಎಟಿಎಂಗಳಿವೆ. ಅದರಲ್ಲಿ ಕೇವಲ ಶೇ.70 ರಷ್ಟು ಎಟಿಎಂಗಳಲ್ಲಿ ಮಾತ್ರ ಹೊಸ ನೋಟುಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಕೇವಲ ಶೇ. 20 ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ತುಂಬಲಾಗುತ್ತದೆ. ಕೆಲವೇ ಕೆಲವು ಎಟಿಎಂ ಗಳಲ್ಲಿ ಮಾತ್ರ 500 ಹಾಗೂ 100 ರು ನೋಟು ಸಿಗುತ್ತಿವೆ, ಉಳಿದಂತೆ ಎಲ್ಲಾ ಎಟಿಎಂ ಗಳಲ್ಲೂ 2 ಸಾವಿರ ರೂಪಾಯಿ ನೋಟುಗಳು ಮಾತ್ರ ಸಿಗುತ್ತಿವೆ. ಹೀಗಾಗಿ ಚಿಲ್ಲರೆಗಾಗಿ ಇನ್ನಿಲ್ಲದ ಪ್ರಯಾಸ ಮುಂದುವರೆದಿದೆ.