ಸಮೀಕ್ಷೆ: ಪಂಜಾಬ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಶುಕ್ರವಾರ, 14 ಅಕ್ಟೋಬರ್ 2016 (13:13 IST)
ಒಂದು ವೇಳೆ ಈ ಸಂದರ್ಭದಲ್ಲಿ ಪಂಜಾಬ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಲ್ಲಿ ಕಾಂಗ್ರೆಸ್ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.   
 
ಇಂಡಿಯಾ ಟುಡೇ ಗ್ರೂಪ್‌ನ ಎಕ್ಸಿಸ್ ಮೈ ಇಂಡಿಯಾ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಆಮ್ ಆದ್ಮಿ ಪಾರ್ಟಿ ಎರಡನೇ ಸ್ಥಾನ ಪಡೆಯಲಿದೆ. ಅಧಿಕಾರರೂಢ ಬಿಜೆಪಿ- ಸಾದ್ ಮೈತ್ರಿಕೂಟ ಮೂರನೇ ಸ್ಥಾನಪಡೆದು ಹೀನಾಯ ಮುಖಭಂಗ ಅನುಭವಿಸಬೇಕಾಗಿ ಬಂದಿದೆ. 
 
ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 49 ರಿಂದ 55 ಸ್ಥಾನಗಳಲ್ಲಿ ಜಯಗಳಿಸಲಿದ್ದು, ಆಪ್ ಪಕ್ಷ 42 ರಿಂದ 46 ಸ್ಥಾನಗಳಲ್ಲಿ ಜಯಬೇರಿ ದಾಖಲಿಸಲಿದೆ. ಬಿಜೆಪಿ-ಸಾದ್ ಮೈತ್ರಿಕೂಟ 17 ರಿಂದ 21 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
 
ಸಮೀಕ್ಷೆಯಲ್ಲಿ ಮತ ಹಂಚಿಕೆ ಪ್ರಕಾರ ಕಾಂಗ್ರೆಸ್ ಶೇ.33 ರಷ್ಟು ಮತಗಳನ್ನು ಪಡೆಯಲಿದ್ದರೆ, ಆಪ್ ಪಕ್ಷ ಶೇ.30 ರಷ್ಟು ಮತಗಳನ್ನು ಪಡೆಯಲಿದೆ. ಬಿಜೆಪಿ-ಸಾದ್ ಶೇ.15 ರಷ್ಟು ಮತಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
 
ಸಮೀಕ್ಷೆಯಲ್ಲಿ ಶೇ.86 ರಷ್ಟು ಜನರು ಡ್ರಗ್ಸ್ ಪ್ರಮುಖ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟರೆ, ಶೇ.80 ರಷ್ಟು ಜನ ಡ್ರಗ್ಸ್ ನಿಯಂತ್ರಿಸುವಲ್ಲಿ ರಾಜಕಾರಣಿಗಳು ವಿಫಲವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ- ಸಾದ್ ಮೈತ್ರಿಕೂಟ ಪಡೆದಿದ್ದ ಶೇ.22 ರಷ್ಟು ಮತಗಳು ಆಪ್ ಪಕ್ಷಕ್ಕೆ ವರ್ಗಾವಣೆಗೊಂಡಿದ್ದರೆ, ಶೇ.19 ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಶಿಫ್ಟ್ ಆಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ