ಪ್ರಧಾನಿ ಮೋದಿ ಸೋಲಿಸಲು ಒಂದಾದ ವಿಪಕ್ಷಗಳು

ಭಾನುವಾರ, 16 ಏಪ್ರಿಲ್ 2017 (07:16 IST)
ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಪ್ರಧಾನಿ ಮೋದಿ ತಯಾರಿ ನಡೆಸುತ್ತಿದ್ದರೆ, ರಾಷ್ಟ್ರದ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಮೋದಿ ಸೋಲಿಸಲು ಒಂದಾಗುತ್ತಿದ್ದಾರೆ.

 

ಬದ್ಧ ವೈರಿಗಳಾಗಿದ್ದ, ಬಿಎಸ್ ಪಿ ನಾಯಕಿ ಮಾಯಾವತಿ ಮತ್ತು ಎಸ್ ಪಿ ನಾಯಕ ಅಖಿಲೇಶ್ ಯಾದವ್ ಪರಸ್ಪರ ಸ್ನೇಹ ಹಸ್ತ ಚಾಚಿದ್ದಾರೆ. ಇವರ ಜತೆಗೆ ಕಾಂಗ್ರೆಸ್ ಕೂಡಾ ಕೈ ಜೋಡಿಸುವ ಸಾಧ್ಯತೆಯಿದೆ.

 
ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಮೊದಲಿನಿಂದಲೂ ಮೈತ್ರಿ ಬಗ್ಗೆ ಒಲವು ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಮೈತ್ರಿಯಾಗುವುದು ಅಷ್ಟು ಸುಲಭವಲ್ಲ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡುವುದು ಕನಸಿನ ಮಾತೇ ಸರಿ. ಒಂದು ವೇಳೆ ಮಾಡಿಕೊಂಡರೂ, ನಾಯಕತ್ವದ ಸಮಸ್ಯೆ ಕಾಡಬಹುದು. ಸದ್ಯಕ್ಕೆ ಪ್ರಯತ್ನವಂತೂ ಜಾರಿಯಲ್ಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ