ಜಿಎಸ್‌ಟಿ ವಿಶೇಷ ಅಧಿವೇಶನ ಬಹಿಷ್ಕರಿಸಲು ಪ್ರತಿಪಕ್ಷಗಳ ನಿರ್ಧಾರ

ಗುರುವಾರ, 29 ಜೂನ್ 2017 (15:11 IST)
ನಾಳೆ ರಾತ್ರಿ ಸಂಸತ್ತಿನಲ್ಲಿ ನಡೆಯಲಿರುವ  ಜಿಎಸ್‌ಟಿ ಜಾರಿ ವಿಶೇಷ ಅಧಿವೇಶನವನ್ನು ಬಹಿಷ್ಕರಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
 
ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ಒಟ್ಟು 17 ಪಕ್ಷಗಳು ವಿಶೇಷ ಅಧಿವೇಶನ ಬಹಿಷ್ಕರಿಸಲು ಅಂತಿಮ ತೀರ್ಮಾನ ತೆಗೆದುಕೊಂಡಿವೆ.
 
ಕೇಂದ್ರ ಸರಕಾರ ತರಾತುರಿಯಲ್ಲಿ ಜಿಎಸ್‌ಟಿ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದೆ. ಜಿಎಸ್‌ಟಿ ಮಸೂದೆ ಜಾರಿ ವಿಶೇಷ ಅಧಿವೇಶನವನ್ನು ಕಾನೂನಿನ ಪ್ರಕಾರ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ಉದ್ಘಾಟಿಸಬೇಕು. ಆದರೆ, ಪ್ರಧಾನಮಂತ್ರಿ ಉದ್ಘಾಟಿಸುತ್ತಿರುವುದರಿಂದ ಅಧಿವೇಶನವನ್ನು ಬಹಿಷ್ಕರಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
 
ಜಿಎಸ್‌ಟಿ ಜಾರಿಯಿಂದ ಬಡವರು, ಸಣ್ಣ ವ್ಯಾಪಾರಿಗಳ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.     

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ