ಮಾರ್ಕೇಂಡೇಯ ಜಲಾಶಯಕ್ಕೂ ತಮಿಳುನಾಡಿನಿಂದ ವಿರೋಧ

ಬುಧವಾರ, 8 ಮೇ 2019 (12:09 IST)
ನವದೆಹಲಿ : ಮೇಕೆದಾಟು ಯೋಜನೆ ಬಳಿಕ ತಮಿಳುನಾಡು ಇದೀಗ ಮಾರ್ಕೇಂಡೇಯ ಜಲಾಶಯಕ್ಕೂ ವಿರೋಧ ವ್ಯಕ್ತಪಡಿಸುತ್ತಿದೆ.




ಪೆನ್ನಾರ್ ಮತ್ತು ಪಾಲಾರ್ ಕಣಿವೆ ವ್ಯಾಪ್ತಿಯ ನೀರು ಬಳಸಿಕೊಳ್ಳುವ `ಮಾರ್ಕಂಡೇಯ' ಯೋಜನೆಗೆ ಕುರಿತು ಇತರ ರಾಜ್ಯಗಳಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ  ಯೋಜನೆಗಳಿಗೆ ಅವಕಾಶ ನೀಡದಂತೆ ತಮಿಳುನಾಡು ಸುಪ್ರೀಂಕೋರ್ಟ್ ನಲ್ಲಿ ಮಂಗಳವಾರ ಮೇಲ್ಮನವಿ ಸಲ್ಲಿಸಿದೆ.


ಎತ್ತಿನ ಹೊಳೆ ಯೋಜನೆಗಾಗಿ ನಿರ್ಮಿಸಲು ಹೊರಟಿರುವ ಮಾರ್ಕೆಂಡೇಯ ಜಲಾಶಯ ಪೆನ್ನಾರ್ ನದಿ ನೈಸರ್ಗಿಕ ಹರಿವಿಗೆ ಧಕ್ಕೆ ಮಾಡಲಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ಆರು ಜಿಲ್ಲೆಗಳಿಗೆ ತೊಂದರೆಯಾಗಲಿದೆ. ಅಷ್ಟೇ ಅಲ್ಲದೇ ಕುಡಿಯುವ ನೀರಿನ ನೆಪದಲ್ಲಿ ಕೃಷಿ ನೀರಾವರಿಗೆ ಕರ್ನಾಟಕ ಯೋಜನೆ ರೂಪಿಸಿದೆ. ಕೆಳ ರಾಜ್ಯಗಳ ಒಪ್ಪಿಗೆ ಇಲ್ಲದೇ ಕೆ.ಸಿ.ವ್ಯಾಲಿ ಸೇರಿ ಇನ್ನೂ ಯಾವ ಯೋಜನೆಗೂ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ