ನವದೆಹಲಿ : ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯ ವಿರುದ್ಧ ಎಐಎಂಐ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪವೊಂದನ್ನು ಮಾಡಿದ್ದಾರೆ.
ಪ್ರಧಾನಿ ಮೋದಿ ನಿನ್ನೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡುವಾಗ ಸಾಲು ಸಾಲಾಗಿ ಹಬ್ಬಗಳ ಹೆಸರನ್ನು ಹೇಳಿದ್ದಾರೆ. ಈ ಬಗ್ಗೆ ಟೀಕೆ ಮಾಡಿರುವ ಓವೈಸಿ, ಮುಂಬರುವ ಹಬ್ಬಗಳ ಹೆಸರು ಹೇಳಿದ ಪ್ರಧಾನಿಗಳು ಬಕ್ರಿದ್ ಹಬ್ಬದ ಹೆಸರು ಹೇಳಲಿಲ್ಲ. ಪರವಾಗಿಲ್ಲ, ಮುಂಚಿತವಾಗಿ ನಿಮಗೆ ಬಕ್ರಿದ್ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.