ಕೇಂದ್ರ ಸರ್ಕಾರದಿಂದ ಅನ್ ಲಾಕ್ 2 ಮಾರ್ಗಸೂಚಿ ಬಿಡುಗಡೆ

ಮಂಗಳವಾರ, 30 ಜೂನ್ 2020 (08:03 IST)
ನವದೆಹಲಿ : ಅನ್ ಲಾಕ್ 1 ಜೂನ್ 30ಕ್ಕೆ ಕೊನೆಗೊಳ್ಳುವ ಹಿನ್ನಲೆಯಲ್ಲಿ  ಕೇಂದ್ರ ಸರ್ಕಾರ ಅನ್ ಲಾಕ್ 2 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಇದರ ಪ್ರಕಾರ ಜುಲೈ 31ರವರೆಗೆ ಶಾಲಾಕಾಲೇಜು, ತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ. ಹಾಗೇ ಮೆಟ್ರೋ ರೈಲು, ಸಿನಿಮಾ ಥಿಯೇಟರ್ ಗಳು, ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಕ್ ಗಳು, ಬಾರ್, ಸಭಾ ಭವನಗಳು ತೆರೆಯುವಂತಿಲ್ಲ ಎಂದು ತಿಳಿಸಿದೆ.

ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮದುವೆ ಸಮಾರಂಭಕ್ಕೆ 50ಕ್ಕಿಂತ ಹೆಚ್ಚು ಜನರು ಹಾಗೂ ಅಂತ್ಯಕ್ತಿಯೆಗೆ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.ವರ್ಕ್ ಫ್ರಂ ಹೋಂಗೆ ಹೆಚ್ಚು ಆದ್ಯತೆ ನೀಡಬೇಕು. ಮಾಲ್, ಮಾರುಕಟ್ಟೆ, ಧಾರ್ಮಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ , ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಡ್ಡಾಯ ಎಂಬುದಾಗಿ ತಿಳಿಸಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ