ಪೌರತ್ವ ತಿದ್ದುಪಡಿ ಮಸೂದೆ ಪ್ರತಿಯನ್ನು ಹರಿದು ಹಾಕಿದ ಓವೈಸಿ. ಕಾರಣವೇನು ಗೊತ್ತಾ?

ಮಂಗಳವಾರ, 10 ಡಿಸೆಂಬರ್ 2019 (06:54 IST)
ನವದೆಹಲಿ : ಲೋಕಸಭೆಯಲ್ಲಿ ಮಂಡಿಸಲಾದ ಪೌರತ್ವ ತಿದ್ದುಪಡಿ ಮಸೂದೆಯನ್ನು ಎಐಎಂಐಎಂ ನಾಯಕ ಅಸಾದುದ್ವಿನ್  ಓವೈಸಿ ಆಕ್ರೋಶದಿಂದ ಹರಿದುಹಾಕಿ ಚರ್ಚೆಗೆ ಕಾರಣರಾಗಿದ್ದಾರೆ.



ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ ನಡೆದ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದು, ಇದು ಪಾಸ್ ಕೂಡ ಆಗಿತ್ತು. ಆದರೆ ಎಐಎಂಐಎಂ ನಾಯಕ ಅಸಾದುದ್ವಿನ್  ಓವೈಸಿ ಈ ಮಸೂದೆಯ ಮೂಲಕ ಭಾರತವನ್ನು ವಿಭಾಗಿಸಲಾಗುತ್ತಿದೆ. ಹೀಗಾಗಿ  ಈ ಮಸೂದೆಯನ್ನು ಹರಿದು ಹಾಕುವುದಾಗಿ ಹೇಳಿ ಪ್ರತಿಯನ್ನು ಎಲ್ಲರ ಸಮ್ಮುಖದಲ್ಲಿ ಹರಿದುಹಾಕಿದ್ದಾರೆ.


ಬಿಜೆಪಿ ಸರ್ಕಾರ ದೇಶದಲ್ಲಿ ಮುಸ್ಲಿಮರನ್ನು ಅಂಚಿನಲ್ಲಿರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಈ ಮಸೂದೆ ಸಂವಿಧಾನದ ವಿರುದ್ಧವಾಗಿದೆ. ಇದು ಮುಸ್ಲಿಮರನ್ನು ದೇಶದ ಪೌರತ್ವರಹಿತರನ್ನಾಗಿ ಮಾಡುವ ಪಿತೂರಿ ಎಂದು ಅವರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ