ಭಾರತದ ಆರ್ಥಿಕತೆ ಎಂದರೆ ಮೂರು ಟಯರ್ ಪಂಕ್ಷರ್ ಆದ ಕಾರು ಇದ್ದಂತೆ: ಪಿ ಚಿದಂಬರಂ ಟೀಕೆ
ಸೋಮವಾರ, 4 ಜೂನ್ 2018 (09:32 IST)
ನವದೆಹಲಿ: ಭಾರತದ ಪ್ರಸಕ್ತ ಆರ್ಥಿಕತೆ ಹೇಗಿದೆ ಎಂದರೆ ಮೂರು ಟಯರ್ ಪಂಕ್ಚರ್ ಆದ ಕಾರಿದ್ದಂತೆ ಇದೆ ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಖಾಸಗಿ ಬಂಡವಾಳಶಾಹಿತ್ವ, ಖಾಸಗಿ ಬಳಕೆ, ರಫ್ತು ಮತ್ತು ಸರ್ಕಾರದ ವೆಚ್ಚ ಎಂಬುದು ಆರ್ಥಿಕತೆಯ ನಾಲ್ಕು ಚಕ್ರಗಳಿದ್ದಂತೆ. ಒಂದೋ ಎರಡೋ ಚಕ್ರ ಹಾಳಾಗಿದ್ದರೆ ಆರ್ಥಿಕತೆ ನಿಧಾನವಾಗಬಹುದು. ಆದರೆ ನಮ್ಮ ಈಗಿನ ಪರಿಸ್ಥಿತಿಯಲ್ಲಿ ಮೂರು ಚಕ್ರ ಕೆಟ್ಟು ನಿಂತಿದೆ’ ಎಂದು ಚಿದಂಬರಂ ಲೇವಡಿ ಮಾಡಿದ್ದಾರೆ.
ಈ ಹುಳುಕು ಸರಿದೂಗಿಸಲೆಂದೇ ಕೇಂದ್ರ ಪೆಟ್ರೋಲ್, ಡೀಸೆಲ್, ಮತ್ತು ಇತರ ಇಂಧನಗಳ ಬೆಲೆ ಹೆಚ್ಚಳ ಮಾಡುತ್ತಿದೆ ತೆರಿಗೆ ರೂಪದಲ್ಲಿ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.