ನವದೆಹಲಿ : ಬೇರೆ ರಾಷ್ಟ್ರಗಳ ಜೈಲಿನಲ್ಲಿರುವ ನಮ್ಮ ಕೈದಿಗಳ ಪೈಕಿ ಶೇ 90 ರಷ್ಟು ಮಂದಿ ಭಿಕ್ಷುಕರಾಗಿದ್ದಾರೆ ಇಲ್ಲವೇ ಕಳ್ಳರಾಗಿದ್ದಾರೆ ಎಂದು ಪಾಕಿಸ್ತಾನವೂ ಸಹ ಒಪ್ಪಿಕೊಂಡಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ದೇಶದ ರಾಯಭಾರಿಗಳು ತಮ್ಮ ಜೈಲುಗಳು ಪಾಕಿಸ್ತಾನ ತಿರುಕರು ಮತ್ತು ಕಳ್ಳರಿಂದ ತುಂಬಿ ತುಳುಕುತ್ತಿದೆ ಎಂದು ಪಾಕಿಸ್ತಾನಕ್ಕೆ ದೂರು ಸಹ ನೀಡಿದ್ದಾರೆ.
ವಿಶ್ವದಲ್ಲಿಯೇ ಭೇಟಿ ನೀಡಬಹುದಾದ ಅತ್ಯಂತ ಕಳಪೆ ರಾಷ್ಟ್ರಗಳ ಪೈಕಿ ಪಾಕಿಸ್ತಾನಕ್ಕೆ ನಾಲ್ಕನೇ ಸ್ಥಾನ ದೊರಕಿದೆ. ಭಿಕ್ಷುಕರನ್ನು ಮತ್ತು ಕಳ್ಳರನ್ನು ರಫ್ತು ಮಾಡುವ ರಾಷ್ಟ್ರ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಸಹ ಛೀಮಾರಿ ಹಾಕಿದ್ದು, ಈ ಕುರಿತು ಎಚ್ಚರಿಕೆಯನ್ನೂ ರವಾನಿಸಿದೆ.
ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ಥಾನ ಮೊದಲ ಕಳಪೆ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿವೆ. ಅತ್ಯಂತ ಕೆಟ್ಟ ಪಾಸ್ ಪೋರ್ಟ್ ರಾಷ್ಟ್ರ ಎಂಬ ಅಭಿದಾನವೂ ಸಹ ಈ ದೇಶಗಳಿಗೆ ಸಿಕ್ಕಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಬೇರೆ ದೇಶಗಳಿಗೆ ಹೋದಾಗ ಅಪಾಯ ತಪ್ಪಿದ್ದಲ್ಲ.