ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಿದ ಪೋಷಕರು
ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಮತ್ತೊಂದು ಹೆಣ್ಣು ಹುಟ್ಟಿತೆಂದು ಆಕೆಯನ್ನು ಮನೆಯ ಹಿತ್ತಲಿನಲ್ಲೇ ಜೀವಂತ ಸಮಾಧಿ ಮಾಡಿದ್ದಾರೆ. ಮಹಿಳೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.
ಆಕೆಯ ಆರೋಗ್ಯ ವಿಚಾರಿಸಲು ಆರೋಗ್ಯಾಧಿಕಾರಿಗಳು ಮನೆಗೆ ಬಂದಾಗ ಮಗು ಸಾವನ್ನಪ್ಪಿದೆ ಎಂದು ಪೋಷಕರು ಸಮಾಧಿ ಸ್ಥಳ ತೋರಿಸಿದ್ದಾರೆ. ಆದರೆ ಹೆತ್ತಾಗ ಆರೋಗ್ಯವಾಗಿಯೇ ಇದ್ದ ಮಗು ಸಾವನ್ನಪ್ಪಿದ್ದು ಆರೋಗ್ಯಾಧಿಕಾರಿಗಳ ಸಂಶಯಕ್ಕೆಡೆ ಮಾಡಿಕೊಟ್ಟಿತ್ತು. ಹೀಗಾಗಿ ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.