ಪತಂಜಲಿ ಆಮ್ಲ ಜ್ಯೂಸ್ ಸುರಕ್ಷಿತವಲ್ಲ?

ಮಂಗಳವಾರ, 25 ಏಪ್ರಿಲ್ 2017 (12:17 IST)
ನವದೆಹಲಿ: ಬಾಬಾ ರಾಮ್ ದೇವ್ ಅವರ ಪತಂಜಲಿ ಉತ್ಪನ್ನ ದೇಶದಲ್ಲಿ ಭಾರೀ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಆಮ್ಲ ಜ್ಯೂಸ್ ಸುರಕ್ಷಿತವಲ್ಲ ಎಂಬ ಸುದ್ದಿ ಬಂದಿದೆ.

 
ಆಮ್ಲ ಜ್ಯೂಸ್ ಗುಣಮಟ್ಟ ಪರೀಕ್ಷೆ ಸಾಬೀತುಪಡಿಸಲು ವಿಫಲವಾದ ಹಿನ್ನಲೆಯಲ್ಲಿ ಶಸ್ತ್ರಾಸ್ತ್ರ ಪಡೆಗಳ ಕ್ಯಾಂಟೀನ್ ನಿಂದ ಹಿಂಪಡೆಯಲಾಗಿದೆ. ಗುಣಮಟ್ಟ ಸಾಬೀತುಪಡಿಸಲು ವಿಫಲವಾದ ಹಿನ್ನಲೆಯಲ್ಲಿ ಸಂಸ್ಥೆಗೆ ರಕ್ಷಣಾ ಸಚಿವಾಲಯ ಶೋಕಾಸ್ ನೋಟೀಸ್ ನೀಡಿದೆ.

ಆದರೆ ಪತಂಜಲಿ ಸಂಸ್ಥೆ ಈ ಆರೋಪಗಳನ್ನು ಅಲ್ಲಗಳೆದಿದೆ. ಆಮ್ಲಾ ಜ್ಯೂಸ್ ವೈದ್ಯಕೀಯ ಪೇಯವಾಗಿದ್ದು, ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ