ಆಸ್ಪತ್ರೆಗೆ ದಾಖಲಾದ ರಾಮ್ ವಿಲಾಸ್ ಪಾಸ್ವಾನ್

ಶುಕ್ರವಾರ, 13 ಜನವರಿ 2017 (08:59 IST)
ಏಕಾಏಕಿ ಉಸಿರಾಟದ ಸಮಸ್ಯೆಗೊಳಗಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಹಾರಿನ ಪಾಟ್ಣಾದಲ್ಲಿರುವ ಪರಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 
 
ನಿನ್ನೆ ಪಾಟ್ಣಾಗೆ ಭೇಟಿ ನೀಡಿದ್ದ ಸಚಿವರಿಗೆ ನಿನ್ನೆ ಸಾಯಂಕಾಲ ಇದ್ದಕ್ಕಿದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು, ಎಂದು ಸಚಿವರ ಕಿರಿಯ ಸಹೋದರ, ಬಿಹಾರ್ ಎಲ್‌ಜೆಪಿ ಅಧ್ಯಕ್ಷ ಪಶುಪತಿ ಕುಮಾರ್ ತಿಳಿಸಿದ್ದಾರೆ. 
 
ಸಚಿವರು ಅನಾರೋಗ್ಯಕ್ಕೀಡಾದ ಸುದ್ದಿ ಕೇಳುತ್ತಿದ್ದಂತೆ ಪಾಸ್ವಾನ್ ಬೆಂಬಲಿಗರು ಆಸ್ಪತ್ರೆಯ ಹೊರಭಾಗದಲ್ಲಿ ಜಮಾಯಿಸುತ್ತಿದ್ದಾರೆ.ಅವರ ಪತ್ನಿ ಮತ್ತು ಪುತ್ರ ಚಿರಾಗ್ ಆಸ್ಪತ್ರೆಯಲ್ಲಿ ಅವರ ಜತೆಯಲ್ಲಿದ್ದಾರೆ ಎಂದು ಪಕ್ಷದ ವಕ್ತಾರ ಅಶ್ರಫ್ ಅನ್ಸಾರಿ ತಿಳಿಸಿದ್ದಾರೆ.
 
ನಾಲ್ಕು ದಿನಗಳ ಪ್ರವಾಸಕ್ಕಾಗಿ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಬಿಹಾರಕ್ಕೆ ಆಗಮಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ