Pehalgam: ಸರ್ಜಿಕಲ್ ಸ್ಟ್ರೈಕ್ ಹೊರತಾಗಿ ಪಾಕಿಸ್ತಾನಕ್ಕೆ ಭಾರತ ಹೇಗೆಲ್ಲಾ ಹೊಡೆತ ನೀಡಿದೆ ನೋಡಿ

Krishnaveni K

ಗುರುವಾರ, 24 ಏಪ್ರಿಲ್ 2025 (09:00 IST)
ನವದೆಹಲಿ: ಪಹಲ್ಗಾಮದಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ ಭಾರತದ ಅಮಾಯಕ ಪ್ರವಾಸಿಗರನ್ನು ಕೊಂದು ಹಾಕಿದೆ. ಇದರ ವಿರುದ್ಧ ಈಗ ಭಾರತ ಪ್ರತೀಕಾರಕ್ಕೆ ಮುಂದಾಗಿದೆ. ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಹೊರತಾಗಿಯೂ ಭಾರತ ಯಾವೆಲ್ಲಾ ರೀತಿ ಹೊಡೆತ ನೀಡಬಹುದು ಅದೆಲ್ಲಾ ಮಾಡಲು ಹೊರಟಿದೆ.

ಪಹಲ್ಗಾಮದಲ್ಲಿ ಉಗ್ರ ದಾಳಿಯಾಗುತ್ತಿದ್ದಂತೇ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಉಗ್ರರನ್ನು ಸುಮ್ಮನೇ ಬಿಡಲ್ಲ ಈ ದಾಳಿಗೆ ಪ್ರತೀಕಾರ ತೀರಿಸಿಯೇ ಬಿಡುತ್ತೇವೆ ಎಂದು ಶಪಥ ಮಾಡಿದ್ದರು. ವಿದೇಶ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಲ್ಲೇ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ನಿನ್ನೆ ಸಂಜೆಯೂ ಕ್ಯಾಬಿನೆಟ್ ಮೀಟಿಂಗ್ ನಡೆಸಿದ್ದರು.

ಹೀಗಾಗಿ ಭಾರತ ಪ್ರತೀಕಾರ ತೀರಿಸಿಕೊಳ್ಳಲಿರುವುದು ಪಕ್ಕಾ ಆಗಿದೆ. ಅತ್ತ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಭಯ ಶುರುವಾಗಿದ್ದು ಗಡಿಯಲ್ಲಿ ತನ್ನ ಸೇನೆ, ಯುದ್ಧ ವಿಮಾನಗಳನ್ನು ಸನ್ನದ್ಧವಾಗಿರಿಸಿದೆ.

ಪಾಕಿಸ್ತಾನದ ಜೊತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನೂ ಕೊನೆಗೊಳಿಸಲು ಭಾರತ ಸಿದ್ಧತೆ ನಡೆಸಿದೆ. ಭಾರತ ಕೈಗೊಂಡಿರುವ ಕಠಿಣ ನಿರ್ಧಾರಗಳ ಪಟ್ಟಿ ಇಲ್ಲಿದೆ ನೋಡಿ.

-ಭಾರತದಲ್ಲಿರುವ ಪಾಕಿಸ್ತಾನಿಗಳು 48 ಗಂಟೆಯೊಳಗಾಗಿ ದೇಶ ಬಿಡಬೇಕು
-ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೆ ಸಿಂಧು ನದಿ ಒಪ್ಪಂದ ಕಡಿತ.
-ಪಾಕ್ ಗೆ ಏಕೈಕ ರಸ್ತೆ ಭಾಗವಾದ ವಾಘಾ-ಅಟ್ಟಾರಿ ಗಡಿ ರಸ್ತೆ ಬಂದ್
-ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗಳು ವಾಪಸ್
-ಇಲ್ಲಿಗೆ ಅಧಿಕಾರಿಗಳೂ ತಕ್ಷಣವೇ ದೇಶ ತೊರೆಯಬೇಕು.

ಇವಿಷ್ಟು ನಿನ್ನೆ ನಡೆದ ಮೀಟಿಂಗ್ ನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು. ಇದರ ಹೊರತಾಗಿ ಉಗ್ರರ ದಮನಕ್ಕೆ ರೇಡಾರ್ ಬಳಸಿ ಸೇನೆ ಹುಡುಕಾಟ ನಡೆಸುತ್ತಿದೆ. ಉಗ್ರರ ಹೆಡೆಮುರಿ ಕಟ್ಟಲು ಇನ್ನಷ್ಟು ಕಾರ್ಯಾಚರಣೆ ನಡೆಯಲಿದ್ದು ಸದ್ಯಕ್ಕೆ ಅದು ಗೌಪ್ಯವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ