ಸಹೋದ್ಯೋಗಿಗೆ ತೊಂದರೆ ನೀಡಿದ್ರೆ ದಂಡ..!
ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ದೈಹಿಕ ಸಾಮರ್ಥ್ಯ ಕುಗ್ಗುವಂತಾಗಿದೆ. ಆದ್ದರಿಂದ ಸಂಸ್ಥೆಯ ಸಿಬ್ಬಂದಿ ರಜಾ ದಿನಗಳನ್ನು ಆರಾಮದಾಯಕವಾಗಿ ಕಳೆಯುವಂತೆ ಮಾಡಲು ಮುಂಬೈ ಮೂಲದ ಕಂಪನಿ ಹೊಸ ನಿಯಮ ಜಾರಿಗೊಳಿಸಿದೆ.
ಸಂಸ್ಥೆಯ ಉದ್ಯೋಗಿಗಳು ರಜೆಯಲ್ಲಿದ್ದಾಗಲೂ ಕೆಲ ಸಹೋದ್ಯೋಗಿಗಳು ಅವರಿಗೆ ಉದ್ಯಮದ ವಿಚಾರದಲ್ಲಿ ಕಿರಿಕಿರಿ ಮಾಡುವುದು, ದೂರವಾಣಿ ಕರೆ, ಇಮೇಲ್ ಕಳಿಸಿ ತೊಂದರೆ ನೀಡದಂತೆ ತಾಕೀತು ಮಾಡಿದೆ.