ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಯುವಕನಿಗೆ ಗ್ರಾಮಸ್ಥರು ಮಾಡಿದ್ದೇನು?
ಭಾನುವಾರ, 7 ಫೆಬ್ರವರಿ 2021 (06:57 IST)
ಆಗ್ರಾ : ಉತ್ತರಪ್ರದೇಶದ ಆಗ್ರಾದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಯುವಕನಿಗೆ ಮುಖಕ್ಕೆ ಕಪ್ಪು ಬಣ್ಣ ಹಚ್ಚಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ವಿವಾಹಿತ ಮಹಿಳೆ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಮಹಿಳೆ ತನ್ನ ಪತಿಯನ್ನು ಬಿಟ್ಟು ಆ ಯುವಕನೊಂದಿಗೆ ಓಡಿಹೋಗಿ ಮತ್ತೆ ಗ್ರಾಮಕ್ಕೆ ಮರಳಿದ್ದಾರೆ. ಆ ವೇಳೆ ಗ್ರಾಮಸ್ಥರು ಸೇರಿ ಮಹಿಳೆ ಮತ್ತು ಯುವಕನಿಗೆ ಇಂತಹ ಅವಮಾನ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.