ತಪ್ಪು ಗ್ರಹಿಕೆಯಿಂದ ಆಟೋ ಚಾಲಕನ ಥಳಿಸಿ ಕೊಂದ ಜನ

ಮಂಗಳವಾರ, 25 ಜನವರಿ 2022 (10:31 IST)
ಮುಂಬೈ: ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳೋದು ಎಂದರೆ ಇದುವೇ ಇರಬೇಕು. ಆಟೋ ಚಾಲಕನೊಬ್ಬನನ್ನು ಮುಂಬೈನಲ್ಲಿ ತಪ್ಪು ಗ್ರಹಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಆಟೋ ಚಾಲಕನಾಗಿದ್ದ ಶಾರುಖ್ ಶೇಖ್ ಎಂಬಾತ 10 ದಿನಗಳಿಂದ ರಸ್ತೆ ಬದಿ ನಿಲ್ಲಿಸಿದ್ದ ತಮ್ಮ ಆಟೋ ನೋಡಲು ಹೋಗಿದ್ದರು. ಅವರು ಆಟೋ ಪರಿಶೀಲಿಸುತ್ತಿದ್ದುದು ನೋಡಿ ಸ್ಥಳೀಯರು ಆಟೋ ಕಳ್ಳಲು ಬಂದವನೆಂದು ತಪ್ಪು ಗ್ರಹಿಸಿ ಹಿಗ್ಗಾಮುಗ್ಗಾ ಥಳಿಸಿ ರಸ್ತೆ ಬದಿ ಬಿಟ್ಟು ತೆರಳಿದ್ದರು.

ತೀವ್ರ ಗಾಯಗೊಂಡಿದ್ದ ಶಾರುಖ್ ಶೇಖ್ ರಸ್ತೆ ಬದಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.  ಯಾರೋ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರಿಂದ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಚಾಲಕ ಸಾವನ್ನಪ್ಪಿದ್ದರು. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ