ಕೋಳಿ ಮೊಟ್ಟೆ ಇಡದಿದ್ದಕ್ಕೆ ಫುಡ್ ಕಂಪೆನಿಯ ವಿರುದ್ಧ ದೂರು ದಾಖಲಿಸಲು ಹೊರಟ ವ್ಯಕ್ತಿ

ಭಾನುವಾರ, 25 ಏಪ್ರಿಲ್ 2021 (10:03 IST)
ಪುಣೆ : ಕೋಳಿ ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಹಾರ ಉತ್ಪಾದಕ ಘಟಕದ  ವಿರುದ್ಧ ಪ್ರಕರಣ ದಾಖಲಿಸಲು ಹೊರಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ವ್ಯಕ್ತಿ ಕೋಳಿಗಳಿಗೆ  ಪುಣೆಯ ಅಹ್ಮದ್ ನಗರದ ಕೋಳಿ ಆಹಾರ ಉತ್ಪಾದಕ ಘಟಕದಿಂದ ಫುಡ್ ಅನ್ನು ತಂದು ಹಾಕಿದ. ಆದರೆ ಆ ಫುಡ್ ತಿಂದ ಕೋಳಿಗಳು ಮೊಟ್ಟೆ ಹಾಕುವುದನ್ನು ನಿಲ್ಲಿಸಿವೆಯಂತೆ. ಹೀಗಾಗಿ ವ್ಯಕ್ತಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಆಗ ಕಂಪೆನಿ ಆತನಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ.

ಹಾಗೇ ಪಶುಸಂಗೋಪನಾ ಅಧಿಕಾರಿ ಈ ಆಹಾರವನ್ನು ಪರಿಶೀಲಿಸಿದಾಗ ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಗಳಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ