ಯಾರೂ ಇಲ್ಲದ ವೇಳೆ ಹಸುವಿನ ಜತೆ ಈ ರೀತಿಯಾಗಿ ವರ್ತಿಸಿದ ನೀಚ
ಶುಕ್ರವಾರ, 6 ನವೆಂಬರ್ 2020 (09:26 IST)
ರಾಜ್ ಕೋಟ್ : 42 ವರ್ಷದ ವ್ಯಕ್ತಿಯೊಬ್ಬ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ನಡೆದಿದೆ.
ಭರತ್ ಅಸ್ವರ್(42) ಇಂತಹ ಕೃತ್ಯ ಎಸಗಿದ ಆರೋಪಿ. ಈತ ಹಸುವಿನ ಜೊತೆ ಇಂತಹ ಘೋರ ಕೃತ್ಯ ಎಸಗುತ್ತಿದ್ದಾಗ ಸಾಮಾಜಿಕ ಕಾರ್ಯಕರ್ತರೊಬ್ಬರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಗ ಆತ ಅವರ ಕೈಯಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಸಿಸಿಟಿ ದೃಶ್ಯವನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.