ಸರ್ಕಾರಿ ಸಮಾರಂಭಗಳಲ್ಲಿ ಮಾಂಸದೂಟ ನಿಷೇಧಿಸಲು ಪೇಟಾ ಮನವಿ

ಮಂಗಳವಾರ, 25 ಏಪ್ರಿಲ್ 2017 (18:45 IST)
ದೇಶದ ಎಲ್ಲ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಮಾಂಸದೂಟ ನಿಷೇಧಿಸುವಂತೆ ಪ್ರಾಣಿದಯಾ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ. ಜಾಗತಿಕ ಉದಾಹರಣೆ ಮೂಲಕ ಸಸ್ಯಾಹಾರಿ ಊಟವನ್ನ ುತ್ಥೆಜಿಸುವಂತೆ ಪೇಟಾ ಮನವಿ ಸಲ್ಲಿಸಿದೆ.
 

ಜರ್ಮನಿ ಸರ್ಕಾರದ ಪರಿಸರ ಸಚಿವರು ಇತ್ತೀಚೆಗೆ ಸರ್ಕಾರದ ಎಲ್ಲ ಸಭೆ, ಸಮಾರಂಭಗಳಲ್ಲಿ ಮಾಂಸಾಹಾರವನ್ನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಭಾರತದ ದೇಶದ ಸಚಿವಾಲಯಗಳಿಗೂ ಮಾಂಸದುಟ ರಹಿತ ಸಭೆ, ಸಮಾರಂಭ ನಡೆಸಲು ನಿರ್ದೇಶನ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದೆ.

ಮಾಂಸದ ಉತ್ಪಾದನೆ ಉದ್ಯಮ ಜಾಗತಿಕ ತಾಪಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿಯೇ ಜರ್ಮನಿ ಸರ್ಕಾರ ಮಾಂಸದೂಟವನ್ನ ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿದೆ. ಭಾರತದಲ್ಲೂ ಮಾಂಸೋತ್ಪನ್ನದ ಪರಿಣಾಮ ಗಂಭೀರ ಬರ, ಬಿಸಿಗಾಳಿ, ಇವೇ ಮುಂತಾದ ಸಮಸ್ಯೆ ಎದುರಾಗುತ್ತಿದೆ ಎಂದು ಪೇಟಾ ವಾದಿಸಿದೆ.

ಮಾಂಸೋದ್ಯಮ ಭೂಗ್ರಹದ ತಾಪಮಾನ ಏರಿಸುವ ಜೊತೆಗೆ ನೈಸರ್ಗಿಕ ಸಂಪನ್ಮೂಲವನ್ನ ಹಾಳುಗೆಡವುತ್ತಿದೆ. ನಮಮ ತಟ್ಟೆಗಳಿಂದಲೇ ತಾಪಮಾನ ಏರಿಕೆ ವಿರುದ್ಧ ಹೋರಾಡಬೇಕಿದೆ ಎಂದು ಪೇಟಾ ತಿಳಿಸಿದೆ.

ಹಿಂದೆಂದಿಗಿಂತಲೂ ಇಂದು ತಾಪಮಾನ ಏರಿಕೆ ಪ್ರಮಾಣ 100ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಭಾರತದ ಪಾಲೂ ಇದೆ. ವಿಶ್ವದ ಶೇ.60ರಷ್ಟು ಧಾನ್ಯ ಫಾರ್ಮ್ ಪ್ರಾಣಿಗಳಿಗೆ ಹೋಗುತ್ತಿದೆ. ಒಂದು ಕೆ.ಜಿ ಮಾಂಸಕ್ಕೆ 10 ಕೆ.ಜಿ ಧಾನ್ಯ ಹೋಗುತ್ತಿದೆ. ಜಗತ್ತನ್ನ ಉಳಿಸಲು ಸಸ್ಯಾಹಾರಿ ಜೀವನಶೈಲಿಗೆ ತೆರಳುವುದು ಅತ್ಯಂತ ಪ್ರಮುಖವಾದದ್ದು ಎಂದು ವಿಶ್ವಸಂಸ್ಥೆಯೇ ಹೇಳಿರುವುದಾಗಿ ಪೇಟಾ ಮನವರಿಕೆ ಮಾಡಿಕೊಟ್ಟಿದೆ.

ವೆಬ್ದುನಿಯಾವನ್ನು ಓದಿ