ಸುಂಕ ಕಡಿತದ ನಂತರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ!

ಭಾನುವಾರ, 22 ಮೇ 2022 (14:26 IST)

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2ನೇ ಬಾರಿ ಕಡಿತ ಮಾಡಿದರೂ ದೇಶದಲ್ಲಿ ಪೆಟ್ರೋಲ್ ದರ 100ಕ್ಕಿಂತ ಕಡಿಮೆಯಾಗಿಲ್ಲ!

ಹೌದು, ಕೇಂದ್ರ ಸರಕಾರ ಶನಿವಾರ ಪೆಟ್ರೋಲ್ ಮೇಲಿ ಲೀಟರ್ ಗೆ 8 ರೂ. ಹಾಗೂ ಡೀಸೆಲ್ ಮೇಲೆ ಲೀಟರ್ ಗೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದರಿಂದ ಪೆಟ್ರೋಲ್ ದರ ಲೀಟರ್ ಗೆ 9.5 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 7 ರೂ. ಕಡಿಮೆ ಆಗಿತ್ತು.

ಅಬಕಾರಿ ಸುಂಕ ಕಡಿತದ ನಂತರ ಭಾನುವಾರ ದೇಶದ ಪ್ರಮುಖ ನಗರಗಳಲ್ಲಿ ನೂತನ ದರ ಜಾರಿಗೆ ಬಂದಿದ್ದು, ಮುಂಬೈನಲ್ಲಿ ಪೆಟ್ರೋಲ್ ದರ 120.51ರೂ. ಇದ್ದಿದ್ದು, 111.01ರೂ.ಗೆ ಇಳಿಕೆಯಾಗಿದೆ. ಡೀಸೆಲ್ ದರ 104.77 ರೂ. ಇದ್ದಿದ್ದು, 97.77ರೂ.ಗೆ ಇಳಿಕೆಯಾಗಿದೆ.

ಕೋಲ್ಕತಾದಲ್ಲಿ ಪೆಟ್ರೋಲ್ ದರ 115.12 ರೂ. ಇದ್ದಿದ್ದು, 105.62 ರೂ.ಗೆ ಇಳಿಕೆಯಾದರೆ ಡೀಸೆಲ್ ದರ ಲೀಟರ್ ಗೆ 92.83ರೂ. ಇಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ