ಘಟನೆ ಸಂಬಂಧ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ 15 ಮಂದಿ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ಪರಿಹಾರವನ್ನು ಪ್ರಕಟಿಸಿರುವ ಮೋದಿ ಅವರು, "ಆಗಿರುವ ಜೀವ ಹಾನಿಗೆ ಸಂತಾಪವಿದೆ; ಗಾಯಾಳುಗಳು ಬೇಗನೆ ಗುಣಮುಖವಾಗಲೆಂದು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದ್ದಾರೆ.