ವಿದೇಶ ಯಾನಕ್ಕೆ ಮೊದಲ ಬಾರಿಗೆ ವಿವಿಐಪಿ ವಿಮಾನ ಬಳಸಿದ ಪ್ರಧಾನಿ ಮೋದಿ

ಶನಿವಾರ, 27 ಮಾರ್ಚ್ 2021 (09:23 IST)
ನವದೆಹಲಿ: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಹೊಸ ವಿವಿಐಪಿ ಏರ್ ಕ್ರಾಫ್ಟ್ ಬಳಸಿದ್ದಾರೆ.


ಕಳೆದ ಅಕ್ಟೋಬರ್ ನಲ್ಲಿ ವಿವಿಐಪಿಗಳ ಬಳಕೆಗಾಗಿ ಈ ವಿಶೇಷ ವಿಮಾನ ಬಳಸಲಾಗಿತ್ತು. ಇದನ್ನೀಗ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಬಳಕೆ ಮಾಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಭಾರತ ಸರ್ಕಾರ ಒಟ್ಟು ಎರಡು ವಿಮಾನ ಖರೀದಿ ಮಾಡಿತ್ತು. ಇದನ್ನು ಕೇವಲ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಗಣ್ಯರ ಬಳಕೆಗಾಗಿ ಮಾತ್ರ ಬಳಕೆ ಮಾಡಲಾಗುತ್ತದೆ. ಎಲ್ಲಾ ರೀತಿಯ ವಿವಿಐಪಿ ಸೌಲಭ್ಯಗಳು, ಭದ್ರತೆ ಈ ವಿಮಾನದಲ್ಲಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ