ಭೂತಾನ್ ನ ಪುಟಾಣಿ ಯುವರಾಜನಿಗೆ ಪ್ರಧಾನಿ ಮೋದಿ ಕೊಟ್ಟ ಗಿಫ್ಟ್ ಏನು ಗೊತ್ತಾ?

ಗುರುವಾರ, 2 ನವೆಂಬರ್ 2017 (10:59 IST)
ನವದೆಹಲಿ: ನಾಲ್ಕು ದಿನಗಳ ಭಾರತ ಭೇಟಿಗೆ ಬಂದ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ ಗೇಯ್ಲ್  ವಾಂಗ್ ಚುಕ್ ಜತೆಗೆ ಆಗಮಿಸಿದ ಪುಟಾಣಿ ಯುವರಾಜನಿಗೆ ಪ್ರಧಾನಿ ಮೋದಿ ಅಮೂಲ್ಯ ಉಡುಗೊರೆ ನೀಡಿದ್ದಾರೆ.

 
ಭೂತಾನ್ ರಾಜನ ಪುತ್ರನಿಗೆ ಪ್ರಧಾನಿ ಮೋದಿ ಫಿಫಾ ಅಂಡರ್ 17 ವಿಶ್ವಕಪ್ ಫುಟ್ ಬಾಲ್ ನಲ್ಲಿ ಬಳಸಿದ್ದ ಫುಟ್ ಬಾಲ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಾರತ ಮತ್ತು ಚೀನಾ ಗಡಿಗೆ ತಾಗಿಕೊಂಡಿರುವ ಭೂತಾನ್ ನ ಸಹಕಾರ ಭಾರತಕ್ಕೆ ಅಗತ್ಯವಾಗಿದೆ. ತಮ್ಮ ನಾಲ್ಕು ದಿನಗಳ ಭಾರತ ಪ್ರವಾಸ ವೇಳೆ ಭೂತಾನ್ ರಾಜ ಜಿಗ್ಮೆ ಖೇಸರ್ ಭಾರತದ ರಾಷ್ಟ್ರಪತಿ ಕೋವಿಂದ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಭೇಟಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ