ಪ್ರಧಾನಿ ಮೋದಿಗೆ ನಿದ್ರಾಹೀನತೆಯ ಕಾಯಿಲೆಯಿದೆ : ಕೇಜ್ರಿವಾಲ್

ಶುಕ್ರವಾರ, 24 ಮಾರ್ಚ್ 2023 (10:14 IST)
ನವದೆಹಲಿ : ಪ್ರಧಾನಿ ಮೋದಿಗೆ ನಿದ್ರಾಹೀನತೆಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
 
ಆಮ್ ಆದ್ಮಿ ಪಕ್ಷದ ಮೋದಿ ಹಟಾವೋ-ದೇಶ್ ಬಚಾವೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ್ದೆ. ಆ ವೇಳೆ ಬಿಜೆಪಿ ಕಾರ್ಯಕರ್ತ, ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ, ಕೇವಲ ಮೂರು ಗಂಟೆ ಮಲಗುತ್ತಾರೆ ಎಂದು ಹೇಳಿದ್ದರು.

3 ಗಂಟೆಗಳ ನಿದ್ದೆಯಿಂದ ಕೆಲಸ ಹೇಗೆ ಎಂದು ಕೇಳಿದಾಗ, ಆತ, ಮೋದಿಗೆ ದೈವಿಕ ಶಕ್ತಿ ಇದೆ ಎಂದು ಉತ್ತರಿಸಿದ್ದ. ಅದು ದೈವಿಕ ಶಕ್ತಿಯಲ್ಲ, ಇದು ನಿದ್ರಾಹೀನತೆ ಎಂದು ನಾನು ಹೇಳಿದೆ. ಏಕೆಂದರೆ ಪ್ರಧಾನಿ ದಿನವಿಡೀ ಕೋಪಗೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ದೆಹಲಿಯಲ್ಲಿ ಮೋದಿ ಹಠಾವೋ-ದೇಶ್ ಬಚಾವೋ ಪೋಸ್ಟರ್ಗಳಿಗೆ ಸಂಬಂಧಿಸಿದಂತೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬ್ರಿಟಿಷ್ ಆಳ್ವಿಕೆಯಲ್ಲೂ ಪೋಸ್ಟರ್ಗಳನ್ನು ಹಾಕಿದ್ದಕ್ಕಾಗಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಪೋಸ್ಟರ್ಗಳನ್ನು ಹಾಕಿದ್ದಕ್ಕಾಗಿ 138 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಜನರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ