ಪ್ರಧಾನಿ ಮೋದಿಯಿಂದ ಗೋರಕ್ಷಕರಿಗೆ ಅಪಮಾನ: ವಿಹೆಚ್‌ಪಿ

ಬುಧವಾರ, 17 ಆಗಸ್ಟ್ 2016 (17:52 IST)
ಪ್ರಧಾನಿ ಮೋದಿ ಅವರು ಗೋ ರಕ್ಷಕರಿಗೆ ಅಪಮಾನ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಆರೋಪಿಸಿದೆ. 
 
'ಸಮಾಜ ವಿರೋಧಿ' ಎಂದು ಸಂಬೋಧಿಸುವುದರ ಮೂಲರ ಮೋದಿ ಅವರು ಗೋ-ರಕ್ಷಕರನ್ನು ಅವಮಾನ ಮಾಡಿದ್ದಾರೆ ಎಂದಿರುವ ವಿಹೆಚ್‌ಪಿ ಈ ಕುರಿತು ಮಾತನ್ನಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದೆ.
 
ಗೋ ರಕ್ಷಕರೆಂಬ ಮುಖವಾಡ ಹೊತ್ತಿರುವ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಪ್ರಧಾನಿ ಗೋ ರಕ್ಷಕರಿಗೆ ಅಪಮಾನವೆಸಗಿದ್ದಾರೆ. ಪ್ರತಿಶತ 80 ರಷ್ಟು ನಕಲಿ ಗೋರಕ್ಷಕರಿದ್ದಾರೆ ಎಂದು ಹೇಳಿರುವ ಅವರು ಇದನ್ನು ಪುರಾವೆ ಸಮೇತ ಸಾಬೀತು ಪಡಿಸಬೇಕು ಎಂದು ವಿಹೆಚ್‌ಪಿ ಕಾರ್ಯ ನಿರ್ವಾಹಕ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಆಗ್ರಹಿಸಿದ್ದಾರೆ.
 
ಗೋವನ್ನು ತಾಯಿ ಎಂದು ಪೂಜಿಸುವ ಹಿಂದೂಗಳು ಆಕೆಯ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರು. ಅಂತವರಿಗೆ ನಕಲಿ ಎನ್ನುವುದರ ಮೂಲಕ ಅಪಮಾನ ಮಾಡಲಾಗಿದೆ ಎಂದು ತೊಗಾಡಿಯಾ ಕಿಡಿಕಾರಿದ್ದಾರೆ. 
 
ತಾಯಿ ಎಂಬುದಾಗಿ ಭಾವಿಸಿರುವ ಹಿಂದೂಗಳು ಹಾಗೂ ಗೋರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದಾರೆ. ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸುವ ಬದಲು ಸಮಾಜ-ವಿರೋಧಿ ಎಂಬ ಪಟ್ಟ ನೀಡಿ ಅಪಮಾನ ಮಾಡುವ ಮೂಲಕ ಗೋಮಾತೆಗಷ್ಟೇ ಅಲ್ಲ ಗೋ ರಕ್ಷಣೆಗೆ ತಮ್ಮ ಪ್ರಾಣವನ್ನರ್ಪಿಸಿದ ಎಲ್ಲ ಹಿಂದೂಗಳಿಗೂ ಅವರು ಅವಮಾನ ಮಾಡಿದ್ದಾರೆ ಎಂದು ವಿಎಚ್‌ಪಿ ಮುಖಂಡ ಪ್ರವೀಣ್‌ ತೊಗಾಡಿಯಾ ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ