ಮಹಾತ್ಮ ಗಾಂಧಿ ಪುಣ್ಯತಿಥಿ: ಗೌರವ ನಮನ ಸಲ್ಲಿಸಿದ ಮೋದಿ

ಸೋಮವಾರ, 30 ಜನವರಿ 2017 (14:24 IST)
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 69ನೇ ಪುಣ್ಯತಿಥಿ ಪ್ರಯುಕ್ತ ರಾಜ್‌ಘಾಟ್‌ಗೆ ಭೇಟಿ ನೀಡಿ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.  
ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, "ಪ್ರೀತಿಯ ಬಾಪುವಿನ ಪುಣ್ಯತಿಥಿಯಂದು ಅವರಿಗೆ ಧನ್ಯವಾದಗಳು", ಎಂದು ಬರೆದಿದ್ದಾರೆ. 
 
ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮೊದಲಾದವರು ರಾಜ್‍ಘಾಟ್‍ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
 
1948 ಜನವರಿ 30 ರಂದು ಹಿಂದೂ ರಾಷ್ಟ್ರವಾದಿ ನಾಥೂರಾಮ್ ಗೋಡ್ಸೆ, ಬಿರ್ಲಾ ಹೌಸ್ ಬಳಿ ಪ್ರಾರ್ಥನಾ ಸಭೆ ನಡೆಸುತ್ತಿದ್ದ  ಮಹಾತ್ಮಾ ಗಾಂಧಿ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಗಾಂಧಿ ಎದೆಗೆ ಮೂರು ಗುಂಡುಗಳು ತಗುಲಿದ್ದವು. 
 
ಗಾಂಧಿ ಅವರು ಕೊನೆಯುಸಿರೆಳೆದ ಈ ದಿನವನ್ನು  ಹುತಾತ್ಮ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ