ಪ್ರಧಾನಿ ಮೋದಿ-ರಾಹುಲ್ ಗಾಂಧಿ ಪರಸ್ಪರ ಜಗಳ್ ಬಂದಿ

ಮಂಗಳವಾರ, 4 ಡಿಸೆಂಬರ್ 2018 (08:57 IST)
ನವದೆಹಲಿ: ರಾಜಸ್ಥಾನ ಮತ್ತು ತೆಲಂಗಾಣ ಚುನಾವಣಾ ಕಣ ರಂಗೇರಿದ್ದು, ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ.


ರಾಜಸ್ಥಾನದ ಜೋಧ್ ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರೆ, ತೆಲಂಗಾಣದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಜೋಧ್ ಪುರದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಸುಳ್ಳುಗಳ ವಿಶ್ವವಿದ್ಯಾಲಯವಿದ್ದಂತೆ ಎಂದಿದ್ದಾರಲ್ಲದೆ, ತಮಗೆ ಹಿಂದೂ ತತ್ವದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. ರಾಜಸ್ಥಾನ ಚುನಾವಣೆಗೂ ಹಿಂದೂ ತತ್ವಕ್ಕೂ ಎತ್ತಣ ಸಂಬಂಧ? ಇಲ್ಲಿನ ಜನರಿಗೆ ಅಭಿವೃದ್ಧಿ ಬೇಕೇ ಹೊರತು ನನಗೆ ಹಿಂದೂ ತತ್ವದ ಬಗ್ಗೆ ಗೊತ್ತಿದೆ, ಗೊತ್ತಿಲ್ಲ ಎನ್ನುವುದನ್ನು ನೋಡಿಕೊಂಡು ಜನ ವೋಟ್ ಹಾಕುವುದಲ್ಲ’ ಎಂದು ಲೇವಡಿ ಮಾಡಿದ್ದಾರೆ.

ಇನ್ನೊಂದೆಡೆ ತೆಲಂಗಾಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ ತಮ್ಮನ್ನು ಟಿಆರ್ ಎಸ್ ಜತೆಗೆ ಒಳ ಒಪ್ಪಂದ ಮಾಡಿದ್ದಾಗಿ ಹೇಳಿದ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.  ‘ತೆಲಂಗಾಣದ ಜನರೇ, ಮೋದಿ, ಒವೈಸಿ, ಕೆಸಿಆರ್ ಎಲ್ಲರೂ ಒಂದೇ. ಅವರು ಬೇಕಾದ ಹಾಗೆ ನಾಲಿಗೆ ಹರಿಯಬಿಡುತ್ತಾರೆ. ಅವರ ಮಾತುಗಳಿಗೆ ಮರುಳಾಗಬೇಡಿ’ ಎಂದು ರಾಹುಲ್ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ