ಬಾಲ್ಯ ವಿವಾಹವಾದರೆ ಪೊಲೀಸ್ ಕೇಸ್ ಆಗದಂತೆ ನೋಡಿಕೊಳ್ಳುವೆ: ಬಿಜೆಪಿ ಅಭ್ಯರ್ಥಿಯ ವಿಚಿತ್ರ ಭರವಸೆ
ಬಿಜೆಪಿ ಅಭ್ಯರ್ಥಿ ಶೋಭಾ ಚೌಹಾನ್ ಎಂಬವರು ಇಂತಹದ್ದೊಂದು ವಿವಾದಾತ್ಮಕ ಭರವಸೆ ನೀಡಿದ್ದಾರೆ. ತನ್ನನ್ನು ಗೆಲ್ಲಿಸಿದರೆ ಬಾಲ್ಯ ವಿವಾಹವಾಗುವ ಸ್ಥಳಕ್ಕೆ ಪೊಲೀಸರು ಪ್ರವೇಶಿಸದಂತೆ ನೋಡಿಕೊಳ್ಳುವೆ ಎಂದು ಈಕೆ ವಿವಾದ ಸೃಷ್ಟಿಸಿದ್ದಾರೆ.
ಸೋಜತ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಶೋಭಾ ಹೇಳಿಕೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಮ್ಮ ಬಳಿ, ಅಧಿಕಾರ, ರಾಜ್ಯ ಸರ್ಕಾರವಿದೆ. ನಾವು ಬಾಲ್ಯ ವಿವಾಹದಲ್ಲಿ ಪೊಲೀಸರ ಮಧ್ಯಪ್ರವೇಶವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಚುನಾವಣಾ ರ್ಯಾಲಿಯಲ್ಲಿ ಘೋಷಿಸಿದ್ದಾರೆ.