ಬಿಜೆಪಿಗೆ ಮತ್ತೆ ಅಧಿಕಾರ ಕೊಡ್ತಾರೆ, ಕಾಂಗ್ರೆಸ್ ಬಂದರೆ ನೋ ಎಂಟ್ರಿ ಬೋರ್ಡ್ ಹಾಕ್ತಾರೆ: ಪ್ರಧಾನಿ ಮೋದಿ

Krishnaveni K

ಬುಧವಾರ, 9 ಅಕ್ಟೋಬರ್ 2024 (11:19 IST)
ನವದೆಹಲಿ: ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
 

ಎಲ್ಲೆಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೋ ಅಲ್ಲೆಲ್ಲಾ ಬಿಜೆಪಿಯ ಜನಪರ ನೀತಿಗಳನ್ನು ಮೆಚ್ಚಿ ಜನ ಮತ್ತೆ ಮತ್ತೆ ನಮಗೆ ಅವಕಾಶ ಕೊಡುತ್ತದೆ. ಆದರೆ ಕಾಂಗ್ರೆಸ್ ಗೆ ಹಾಗಲ್ಲ. ಆ ಪಕ್ಷ ಒಮ್ಮೆ ಅಧಿಕಾರಕ್ಕೆ ಬಂದರೆ ಅದರ ನೀತಿಗಳಿಂದ ಬೇಸತ್ತು ಜನ ನೋ ಎಂಟ್ರಿ ಬೋರ್ಡ್ ಹಾಕುತ್ತಾರೆ ಎಂದು ಮೋದಿ ಟಾಂಗ್ ನೀಡಿದ್ದಾರೆ.

ಹರ್ಯಾಣದಲ್ಲಿ ಈ ಬಾರಿ 10 ವರ್ಷಗಳ ಬಿಜೆಪಿ ಆಡಳಿತ ಕೊನೆಯಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ನಿನ್ನೆಯ ವಿಧಾನಸಭೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೇ ಅದೆಲ್ಲವೂ ಸುಳ್ಳಾಗಿದೆ. ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

ಈ ಹಿನ್ನಲೆಯಲ್ಲಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಏರ್ಪಡಿಸಲಾಗಿತ್ತು. ಇದರಲ್ಲಿ ಮೋದಿ ಕೂಡಾ ಭಾಗಿಯಾಗಿದ್ದಾರೆ. ಸಮಾಜವನ್ನು ದುರ್ಬಲಗೊಳಿಸಿ, ಅರಾಜಕತೆ ಸೃಷ್ಟಿಸಿ ಕಾಂಗ್ರೆಸ್ ದೇಶವನ್ನು ದುರ್ಬಲಗೊಳಿಸುತ್ತದೆ. ದೇಶದಲ್ಲಿ ಬೆಂಕಿ ಹಚ್ಚುತ್ತದೆ, ರೈತರನ್ನು ಎತ್ತಿಕಟ್ಟುತ್ತದೆ. ಇದಕ್ಕೆಲ್ಲಾ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ