ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪ್ರಧಾನಿ ಮೋದಿಯಿಂದಲೇ ಭೂಮಿ ಪೂಜೆ

ಸೋಮವಾರ, 20 ಜುಲೈ 2020 (09:39 IST)
ನವದೆಹಲಿ: ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯಲಿದ್ದು, ಪ್ರಧಾನಿ ಮೋದಿಯೇ ಭೂಮಿ ಪೂಜೆ ನೆರವೇರಿಸಲಿದ್ದಾರೆ.


ಪ್ರಧಾನಿ ಮೋದಿ ಲಭ್ಯತೆ ನೋಡಿಕೊಂಡು ಭೂಮಿಪೂಜೆ ದಿನ ನಿಗದಿ ಮಾಡುವುದಾಗಿ ಈ ಮೊದಲು ರಾಮ ಮಂದಿರ ನಿರ್ಮಾಣ ಸಮಿತಿ ಹೇಳಿತ್ತು.

ಅದರಂತೆ ಆಗಸ್ಟ್ 5 ರಂದು ಪ್ರಧಾನಿ ಸಮಕ್ಷಮದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.10 ರೊಳಗಿನ ಶುಭ ಮುಹೂರ್ತದಲ್ಲಿ ಭೂಮಿ ಪೂಜೆ ನೆರವೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ