ರಾಮನ ಜನ್ಮಸ್ಥಾನ ಅಯೋಧ್ಯೆ ಇರುವುದು ಭಾರತದಲ್ಲಾ? ನೇಪಾಳದಲ್ಲಾ?
ಬುಧವಾರ, 15 ಜುಲೈ 2020 (08:54 IST)
ನವದೆಹಲಿ: ನೇಪಾಳ ಪ್ರಧಾನಿ ಕೆಪಿ ಒಲಿ ರಾಮ ಜನಿಸಿದ್ದು ಭಾರತದಲ್ಲಿ ಅಲ್ಲ, ನೇಪಾಳದಲ್ಲಿ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡುತ್ತಿದ್ದಂತೇ ರಾಮ ಜನ್ಮಭೂಮಿ ಬಗ್ಗೆ ಹೊಸದೊಂದು ವಿವಾದ ಹುಟ್ಟಿಕೊಂಡಿದೆ.
ಉತ್ತರ ಪ್ರದೇಶದ ಅಯೋಧ್ಯೆಯೇ ರಾಮಜನ್ಮಭೂಮಿ ಎಂಬುದು ಭಾರತೀಯ ಆಸ್ಥಿಕರ ನಂಬಿಕೆ. ಆದರೆ ಇದೀಗ ಕೆಪಿ ಒಲಿ ಭಾರತದ ವಾದ ಸುಳ್ಳು, ರಾಮ ಹುಟ್ಟಿದ್ದು, ನೇಪಾಳದ ಅಯೋಧ್ಯೆಯಲ್ಲಿ. ಅದು ನೇಪಾಳದ ಥೋರಿ ಎಂಬಲ್ಲಿದೆ ಎಂದು ವಾದ ಮಂಡಿಸಿದ್ದಾರೆ. ಆದರೆ ಅದಕ್ಕೆ ತಕ್ಕ ಪುರಾವೆ ನೀಡಿಲ್ಲ.
ಭಾರತೀಯರ ನಂಬಿಕೆ ಪ್ರಕಾರ ರಾಮ ಭಾರತದಲ್ಲಿ ಹುಟ್ಟಿ, ನೇಪಾಳದ ರಾಜಕುಮಾರಿ ಸೀತೆಯನ್ನು ಮದುವೆಯಾಗಿದ್ದ. ಆದರೆ ಈ ವಾದ ಸುಳ್ಳು ಎಂದು ಕೆಪಿ ಒಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಇದಕ್ಕೂ ಮೊದಲು ವಿವಿಧ ಇತಿಹಾಸ ತಜ್ಞರು ಅಯೋಧ್ಯೆ ನಿಜವಾಗಿ ಎಲ್ಲಿ ಇದೆ ಎಂಬುದರ ಬಗ್ಗೆ ತಮ್ಮದೇ ವಾದ ವ್ಯಕ್ತಪಡಿಸಿದ್ದರು. ಇದೀಗ ಕೆಪಿ ಒಲಿ ವಾದ ಮತ್ತೊಂದು ಚರ್ಚೆಗೆ ಕಾರಣವಾಗಿದೆ.