ಮನ್ ಕೀ ಬಾತ್ ನಂತರ ಪ್ರಧಾನಿ ಮೋದಿಯ ವಿಶಿಷ್ಟ ಕಾರ್ಯಕ್ರಮ

ಮಂಗಳವಾರ, 23 ಮೇ 2017 (10:09 IST)
ನವದೆಹಲಿ: ಮನ್ ಕೀ ಬಾತ್ ಕಾರ್ಯಕ್ರಮದ ಯಶಸ್ಸಿನಲ್ಲಿ ಉತ್ಸಾಹದಲ್ಲಿರುವ ಪ್ರಧಾನಿ ಮೋದಿ ಇದೀಗ ಜನತೆಯ ಅಹವಾಲು ಕೇಳಲು ಜನ್ ಕೀ ಬಾತ್ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

 
ಪ್ರತೀ ತಿಂಗಳು ಕೊನೆ ಭಾನುವಾರ ರೇಡಿಯೋದಲ್ಲಿ ಪ್ರಧಾನಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಸರ್ಕಾರದ ನೀತಿ, ನಿಯಮಾವಳಿಗಳ ಕುರಿತು ಜನರ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಲು ಜನ್ ಕೀ ಬಾತ್ ಕಾರ್ಯಕ್ರಮ ಆರಂಭಿಸಲಿದ್ದಾರೆ.

ಮೇ 26 ರಿಂದ ಪ್ರಧಾನಿ ಕಚೇರಿಯಲ್ಲಿ ಕೇಂದ್ರ  ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಡೆಯಲಿರುವ ಸಂಭ್ರಮಾಚರಣೆಯಲ್ಲಿ ಜನ್ ಕೀ ಬಾತ್ ಭಾಗವಾಗಲಿದೆ ಎನ್ನಲಾಗಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಧ್ವನಿ ಮುದ್ರಣ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಬಹುದು. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ಪ್ರಮುಖ ಸಚಿವರುಗಳೆಲ್ಲಾ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ