ನೋಟು ಅಮಾನ್ಯ ಕ್ರಮ ಎಷ್ಟು ಸರಿ ಎಂದು ಪ್ರಧಾನಿಗೆ ನೀವೇ ಹೇಳಿ!
ಬುಧವಾರ, 8 ನವೆಂಬರ್ 2017 (09:04 IST)
ನವದೆಹಲಿ: ನೋಟು ಅಮಾನ್ಯಗೊಂಡು ವರ್ಷ ತುಂಬಿದ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನೋಟು ನಿಷೇಧ ಕ್ರಮದಿಂದ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಡಲು ಸಾಧ್ಯವಾಗಿದೆಯೇ ಎಂದು ಸಮೀಕ್ಷೆ ನಡೆಸಿ ಹೇಳುವಂತೆ ಕರೆಕೊಟ್ಟಿದ್ದಾರೆ.
ನರೇಂದ್ರ ಮೋದಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಕರೆಕೊಟ್ಟಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಪ್ರಧಾನಿ 125 ಕೋಟಿ ಜನರು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಗೆದ್ದಿದ್ದಾರೆ ಎಂದು ನೋಟು ಅಮಾನ್ಯವನ್ನು ಬಣ್ಣಿಸಿದ್ದಾರೆ.
ಅಷ್ಟೇ ಅಲ್ಲದೆ, ನೋಟು ನಿಷೇಧದಿಂದಾದ ಲಾಭಗಳ ಕುರಿತು ತಯಾರಾದ ಕಿರು ಚಿತ್ರದ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ನೋಟು ನಿಷೇಧವಾಗಿ ಒಂದು ವರ್ಷವಾದ ಹಿನ್ನಲೆಯಲ್ಲಿ ಬಿಜೆಪಿ ಇಂದು ಕಪ್ಪುಹಣ ವಿರೋಧಿ ದಿನ ಎಂದು ದೇಶಾದ್ಯಂತ ಆಚರಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ