ಮನೆಯೊಳಗೇ ಕೂತು ಸೋಮಾರಿಯಾದವರಿಗೆ ಚೇತರಿಕೆ ನೀಡಲಿರುವ ‘ದೀಪ’ ಬೆಳಗುವ ಕಾರ್ಯಕ್ರಮ

ಶನಿವಾರ, 4 ಏಪ್ರಿಲ್ 2020 (09:19 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರ ಹೋಗಲು ಸಾಧ‍್ಯವಾಗುತ್ತಿಲ್ಲ, ಮಿತ್ರರು, ಬಂಧುಗಳು ಬಿಡಿ, ಬೇರೆ ಮನುಷ್ಯರ ಮುಖ ನೋಡಲೂ ಸಾಧ‍್ಯವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದವರಿಗೆ ಭಾನುವಾರದ ದೀಪ ಬೆಳಗುವ ಕಾರ್ಯಕ್ರಮ ಚೇತೋಹಾರಿಯಾಗಲಿದೆ.


ಇದಕ್ಕೂ ಮೊದಲು ಪ್ರಧಾನಿ ಮೋದಿ ಚಪ್ಪಾಳೆ ತಟ್ಟಲು ಹೇಳಿದಾಗ ಜನರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ಆಗ ಒಂದೇ ದಿನದ ಜನತಾ ಕರ್ಫ್ಯೂ ಜಾರಿಯಲ್ಲಿತ್ತಷ್ಟೇ. ಆದರೆ ಅದಾದ ಬಳಿಕ ಈಗ ಲಾಕ್ ಡೌನ್ ಜಾರಿಗೆ ಬಂದು ಒಂದು ವಾರದ ಮೇಲಾಗಿದೆ.

ಮನೆ ಒಂದು ರೀತಿ ಬಿಗ್ ಬಾಸ್ ಮನೆಯಂತಾಗಿದೆ.  ಈ ವೇಳೆ ಬೇಸರ ಕಳೆಯಲು, ರಿಫ್ರೆಶ್ ಆಗಲು ಸಿಕ್ಕ ಅವಕಾಶ ಎಂದಾದರೂ ದೀಪ ಬೆಳಗಲು ಜನರು ಮುಂದಾಗಬಹುದು. ಆದರೆ ಗುಂಪು ಸೇರಿಕೊಂಡು ಸಾಮಾಜಿಕ ಅಂತರ ಮರೆತರೆ ಉದ್ದೇಶ ಈಡೇರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ