ಲಾಕ್ ಡೌನ್ ಬೇಜಾರು ಕಳೆಯಲು ಸೂಪರ್ ಹಿಟ್ ಸಿನಿಮಾಗಳ ನೋಡಿ

ಶನಿವಾರ, 4 ಏಪ್ರಿಲ್ 2020 (09:17 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕೂತು ಬೋರ್ ಆಗ್ತಿದೆ ಎನ್ನುವವರಿಗಾಗಿ ಬೇರೆ ಫಿಲ್ಮ್ ಆಪ್ ಗಳು, ಕಿರುತೆರೆ ಮಾಧ್ಯಮಗಳು ಸೂಪರ್ ಹಿಟ್ ಸಿನಿಮಾಗಳ ಹೂರಣ ನೀಡುತ್ತಿದೆ.


ಕಳೆದ ವಾರವಷ್ಟೇ ಉದಯ ಟಿವಿಯಲ್ಲಿ ಹೊಸ ಸಿನಿಮಾ ‘ಒಡೆಯ’, ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಲವ್ ಮಾಕ್ ಟೈಲ್’ ಪ್ರಸಾರವಾಗಿತ್ತು.

ಈ ವಾರವೂ ಮತ್ತಷ್ಟು ಹೊಸ ಸಿನಿಮಾಗಳು ನಿಮಗಾಗಿ ಬರುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ ಈ ವಾರ ಕಾಳಿದಾಸ ಕನ್ನಡ ಮೇಸ್ಟ್ರು ಎಂಬ ಸಿನಿಮಾ ನೋಡಿ ನಕ್ಕು ನಲಿಯಬಹುದು. ಜತೆಗೆ ಅಮೆಝೋನ್ ಪ್ರೈಮ್ ನಲ್ಲಿ ಮೊನ್ನೆಯಷ್ಟೇ ಥಿಯೇಟರ್ ನಲ್ಲಿ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಮಾಯಾಬಜಾರ್ 2016’ ಸಿನಿಮಾ ಬಂದಿದೆ. ಮನೆಯಲ್ಲೇ ಕೂತು ಬೋರ್ ಆಗ್ತಿದೆ ಎಂದಾಗ ಈ ಸಿನಿಮಾಗಳನ್ನು ನೋಡಿ ಬೇಸರ ಕಳೆಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ