ಇಂದು ಪ್ರಧಾನಿ ಮೋದಿಯವರಿಗೆ 66ನೇ ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಮುಂಜಾನೆಯೇ ಗಾಂಧಿನಗರದ ತಮ್ಮ ನಿವಾಸಕ್ಕೆ ತೆರಳಿ ತಾಯಿಯನ್ನು ಕಂಡು ಅವರಿಂದ ಆರ್ಶೀವಾದ ಪಡೆದು ತಮ್ಮ ಜನ್ಮದಿನವನ್ನು ಆರಂಭಿಸಿದ ಮೋದಿಯವರಿಗೆ, ತಾಯಿ ಹೀರಾ ಬೆನ್ ಸಿಹಿ ತಿನ್ನಿಸಿದರು.
ತಾಯಿ ಮತ್ತು ಕುಟುಂಬದ ಜತೆ ಸ್ವಲ್ಪ ಸಮಯ ಕಳೆದ ಬಳಿಕ ಗುಜರಾತ್‌ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವಿಶೇಷ ದಿನವನ್ನು ಅವರು ಗುಜರಾತ್‌ನ ಬುಡಕಟ್ಟು ಜನಾಂಗ ಮತ್ತು ದಿವ್ಯಾಂಗರ ಜತೆ ಆಚರಿಸಲು ನಿರ್ಧರಿಸಿದ್ದಾರೆ.
ಬುಡಕಟ್ಟು ಜಿಲ್ಲೆ ದಾಹೋದ್‌ಗೆ ತೆರಳಿ ಮೂರು ನೀರಾವರಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಅನೇಕ ಹಿಂದುಳಿದ ಗ್ರಾಮಗಳಿಗೆ ನೀರುಣಿಸುವುದು ಈ ಯೋಜನೆ ಉದ್ದೇಶ.
ಈ ದಿನ ಎಂದಿಗೂ ಮರೆಯಲಾಗದ ದಿನವಾಗುವ ಸಾಧ್ಯತೆಗಳಿವೆ. ಗುಜರಾತ್ ಸರ್ಕಾರ ಮತ್ತು ಇತರ ಸಂಸ್ಥೆಗಳು ಪ್ರಧಾನಿ ಮೋದಿ ಜನ್ಮದಿನಾಚರಣೆಯನ್ನು ಮೂರು ಗಿನ್ನಿಸ್ ದಾಖಲೆ ಮತ್ತು ಒಂದು ರಾಷ್ಟ್ರೀಯ ದಾಖಲೆಯನ್ನಾಗಿಸುವ ಗುರಿಯನ್ನು ಹೊಂದಿವೆ.
ಗುಜರಾತ್ ಸರ್ಕಾರ ನವಸರಿ ಜಿಲ್ಲೆಯಲ್ಲಿ ಆಯೋಜಿಸಿಕೊಂಡಿರುವ ಕಾರ್ಯಕ್ರಮದಲ್ಲಿ 11,223 ಮಂದಿ ದಿವ್ಯಾಂಗರಿಗೆ 17,000 ಕಿಟ್ ನೀಡಲು ನಿರ್ಧರಿಸಿದೆ. ಜತೆಗೆ ಕಾಲಿಲ್ಲದ 1,000 ಜನರಿಗೆ ವ್ಹೀಲ್ ಚೇರ್ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿದೆ. ಈ ಮೊದಲು ಅಮೇರಿಕಾದಲ್ಲಿ (2010) 346 ದಿವ್ಯಾಂಗರಿಗೆ ವ್ಹೀಲ್ ಚೇರ್ ನೀಡಲಾಗಿತ್ತು.
ಜತೆಗೆ ಕಿವಿ ಕೇಳದ 1,000 ಮಂದಿಗೆ ಕಿವಿಗೆ ಹಾಕುವ ಯಂತ್ರವನ್ನು ನೀಡಲಾಗುತ್ತದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಈ ದಾಖಲೆಯನ್ನು ಮಾಡಲಾಗಿತ್ತು.
ಕೊನೆಯದಾಗಿ ಒಂದೇ ಸ್ಥಳದಲ್ಲಿ 1,500 ಎಣ್ಣೆ ದೀಪಗಳನ್ನು ಉರಿಸುವ ದಾಖಲೆಯನ್ನು ಮಾಡುವ ಗುರಿ ಹೊಂದಲಾಗಿದೆ. ಈ ಎಲ್ಲ ದಾಖಲೆಗಳು ಗಿನ್ನಿಸ್ ವರ್ಡ್ ರೆಕಾರ್ಡ್ ಅಧಿಕಾರಿಗಳ ಸಮಕ್ಷಮದಲ್ಲಿಯೇ ನಡೆಯಲಿವೆ.
ಪ್ರಧಾನಿಯವರ ಜನ್ಮದಿನಕ್ಕೆ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಸದಾನಂದ ಗೌಡ, ಮಾಜಿ ಸಿಎಂ, ಜೆಡಿಎಸ್ ಮುಖಂಡ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ