ನೂತನ ರಾಷ್ಟ್ರಪತಿಗೆ ಪ್ರಧಾನಿ ಅಭಿನಂದನೆ

ಗುರುವಾರ, 20 ಜುಲೈ 2017 (17:22 IST)
ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೋವಿಂದ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
 
ರಾಮನಾಥ ಕೋವಿಂದ್‌ ಜಯಶಾಲಿಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಯಾಗಿ ಚುನಾಯಿತರಾದ ರಾಮ‌‌ನಾಥ್‌ ಕೋವಿಂದ್‌ ಜಿ ಗೆ ಅಭಿನಂದನೆಗಳು.. ಪ್ರಭಾವಿ ಮತ್ತು ಸ್ಪೂರ್ತಿದಾಯಕ ಅಧಿಕಾರಾವಧಿ ನಿಮ್ಮದಾಗಲಿ ಹೈರಿಸಿದ್ದಾರೆ. ಅಲ್ಲದೇ ಕೋವಿಂದ್ ಗೆ ಬೆಂಬಲ ನೀಡಿದ ಎಲ್ಲರಿಗೂಧನ್ಯವಾದ ತಿಳಿಸಿರುವ ಪ್ರಧಾನಿ ವಿರೋಧ ಪಕ್ಷದ ಅಭ್ಯರ್ಥಿ ಮೀರಾ ಕುಮಾರ್‌ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
 
ಕೋವಿಂದ್‌ ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ ಮನೆ ಮಾಡಿದ್ದು, ವಿವಿಧ ಬಿಜೆಪಿ ಕಚೇರಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಾಗಿದೆ. ರಾಮನಾಥ್ ಕೋವಿಂದ್ ಅವರು, 7,02,044 ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ