ನವರಾತ್ರಿಯಲ್ಲಿ ಕೇವಲ ಬೆಚ್ಚಗಿನ ನೀರು ಮಾತ್ರ ಸೇವಿಸುವ ಪ್ರಧಾನಿ ಮೋದಿ

ಶನಿವಾರ, 1 ಅಕ್ಟೋಬರ್ 2016 (15:32 IST)
ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ದಿನಗಳವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಬೆಚ್ಚಗಿನ ನೀರು ಮಾತ್ರ ಸೇವಿಸುತ್ತಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. 
 
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿ, ದೇಶದ ನಾಗರಿಕರಿಗೆ ನವರಾತ್ರಿಯ ಶುಭಾಷಯಗಳನ್ನು ಕೋರಿದ್ದಾರೆ.
 
ವಿಶಿಷ್ಠವಾದ ದಸರಾ ಹಬ್ಬ ಅಕ್ಟೋಬರ್ 11 ರಂದು ಆಚರಿಸಲಾಗುತ್ತಿದ್ದು, ಒಂಬತ್ತು ದಿನಗಳವರೆಗೆ ದೇವತೆ ದುರ್ಗಾ ಮಾತೆಯ ಒಂಬತ್ತು ರೂಪಗಳಿಗೆ ಪೂಜೆ ಮಾಡಲಾಗುತ್ತದೆ.
 
ಸಂಪ್ರದಾಯದ ಪ್ರಕಾರ, ಗುಜರಾತ್ ಸರಕಾರ, ನವರಾತ್ರಿ ಸಂದರ್ಭದಲ್ಲಿ ವೈಬ್ರೆಂಟ್ ಗುಜರಾತ್ ನವರಾತ್ರಿ ಮಹೋತ್ಸವ ಅಂದರೆ ಗರ್ಭಾ ಕಾರ್ಯಕ್ರಮವನ್ನು ಡಿಎಂಡಿಸಿ ಮೈದಾನದಲ್ಲಿ ಆಯೋಜಿಸಿದೆ.   
 
ಸಾವಿರಾರು ಭಕ್ತರು ಕಛ್ ಜಿಲ್ಲೆಯಲ್ಲಿರುವ ಅಶಾಪುರಾ ಮಾತಾ, ಉತ್ತರ ಗುಜರಾತ್‌ನಲ್ಲಿರುವ ಅಂಬಾಜಿ ಮಾತಾ ದೇವಾಲಯ ಮತ್ತು ಸೆಂಟ್ರಲ್ ಗುಜರಾತ್‌ನಲ್ಲಿ ಬಹುಚಾರಜಿ ಮಾತಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. 
 
ಹಿಮಾಚಲ ಪ್ರದೇಶದಲ್ಲಿ ಭಕ್ತರು ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ