ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿರುವ ಪ್ರಧಾನಿ ಮೋದಿ

ಮಂಗಳವಾರ, 3 ಜನವರಿ 2017 (13:56 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಿರುಪತಿಗೆ ಆಗಮಿಸಲಿದ್ದು, ಶ್ರೀ ವೆಂಕಟೇಶ್ವರ ದೇವರ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪ್ರಧಾನಿ ಮೋದಿ ಆಂಧ್ರಪ್ರದೇಶದ ಶ್ರೀವೆಂಕಟೇಶ್ವರ್ ಯುನಿವರ್ಸಿಟಿಯ ತಾರಕರಾಮ ಕ್ರೀಡಾಂಗಣದಲ್ಲಿ 104ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.   
 
ಅಮೆರಿಕ, ಜಪಾನ್, ಇಸ್ರೇಲ್, ಫ್ರಾನ್ಸ್ ಮತ್ತು ಬಾಂಗ್ಲಾದೇಶಗಳಿಂದ ಆರು ನೊಬೆಲ್ ಪ್ರಶಸ್ತಿ ವಿಜೇತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ದೇಶದ ಮೂಲೆ ಮೂಲೆಗಳಿಂದ 14,000 ವಿಜ್ಞಾನಿಗಳು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರೊಫೆಸರ್ ಡಿ.ನಾರಾಯಣ್ ರಾವ್ ತಿಳಿಸಿದ್ದಾರೆ.
 
ಕಾರ್ಯಕ್ರಮದ ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಚಹಾ ಕೂಟದಲ್ಲಿ ಭಾಗಿಯಾಗಲಿದ್ದು, ನೊಬೆಲ್ ಪ್ರಶಸ್ತಿ ವಿಜೇತರು, ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ತೊಡಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ದೇಶಾದ್ಯಂತವಿರುವ 12 ಸಾವಿರ ವಿಜ್ಞಾನಿಗಳು, 200 ವಿದೇಶಿ ವಿಜ್ಞಾನಿಗಳು ಮತ್ತು ಅಮೆರಿಕ, ಜಪಾನ್, ಇಸ್ರೇಲ್, ಫ್ರಾನ್ಸ್  ಬಾಂಗ್ಲಾದೇಶಗಳಿಂದ ಆರು ನೊಬೆಲ್ ಪ್ರಶಸ್ತಿ ವಿಜೇತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ