ರಾಮಪ್ರತಿಷ್ಠಾಪನಾ ಕಾರ್ಯಕ್ರಮದ ಬಗ್ಗೆ ಆಡಿಯೋ ಹಂಚಿಕೊಂಡ ಪಿಎಂ

geetha

ಶುಕ್ರವಾರ, 12 ಜನವರಿ 2024 (16:00 IST)
ನವದೆಹಲಿ: ಇಂದಿನಿಂದ ಕೇವಲ ಹನ್ನೊಂದು ದಿನ ಮಾತ್ರ ಬಾಕಿಯಿರುವುದರಿಂದ ಅನುಷ್ಠಾನಗಳೆಲ್ಲಾ ಇಂದಿನಿಂದಲೇ ಪ್ರಾರಂಭವಾಗುತ್ತದೆ. ಇದನ್ನು ಮನಸಿನಲ್ಲಿಟ್ಟುಕೊಂಡು ಪ್ರತಿಯೊಬ್ಬರು ಅನುಷ್ಠಾನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. 

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನಾ ಮಹೂರ್ತಕ್ಕೆ ಕೇವಲ 11 ದಿನ ಬಾಕಿ ಉಳಿದಿದೆ. ಈ ವೇಳೆ ಪ್ರಧಾನಿ ನರೇಂದ್ರ‌ ಮೋದಿ ದೇಶದ ಜನತೆಗೆ ರಾಮಪ್ರತಿಷ್ಠಾಪನಾ ಕಾರ್ಯಕ್ರಮದ ಬಗ್ಗೆ ಆಡಿಯೋ ಸಂದೇಶವನ್ನು ಹಂಚಿಕೊಂಡಿದ್ದು, ಇಂಥದ್ದೊಂದು ಐತಿಹಾಸಿಕ ಸಂದರ್ಭಕ್ಕೆ ನಾನು ಸಮಸ್ತ ಭಾರತೀಯರನ್ನು ಪ್ರತಿನಿಧಿಸುವ ನಿಮಿತ್ತಮಾತ್ರವಾಗಿದ್ದೇನೆ ಎಂದು ಗೀತಾವಾಕ್ಯವನ್ನು  (ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್‌ ) ಉಲ್ಲೇಖಿಸಿದ್ದಾರೆ . 
 
ಕೆಲವೊಮ್ಮೆ ಜೀವನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ ಸೌಭಾಗ್ಯದ ಘಳಿಗೆಗಳು ಬರುತ್ತವೆ. ಅಂಥದ್ದೊಂದು ಶುಭ ಸಂದರ್ಭವನ್ನು ನಾವು ಎದುರು ನೋಡುತ್ತಿದ್ದೇವೆ.  ಈ ಘಳಿಗೆಯು ಹಲವು ಪೀಳಿಗೆಗಳ ಕನಸಾಗಿತ್ತು. ಅದಿಂದು ನನಸಾಗಿದೆ. ವಿಶ್ವದ ಎಲ್ಲಾ ರಾಮಭಕ್ತರು ಸಹ ಈ ಸುವರ್ಣ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಕೋಟ್ಯಾಂತ ಭಾರತೀಯರ ಪ್ರತಿನಿಧಿಯಾಗಿ ನಾನೂ ಸಹ ಈ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಮಹಾ ಪುಣ್ಯವೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ