ವೇಶ್ಯಾಗೃಹಕ್ಕೆ ದಾಳಿ ಮಾಡಿದಾಗ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ: ಕೋರ್ಟ್

ಮಂಗಳವಾರ, 21 ಜೂನ್ 2022 (09:20 IST)
ಚೆನ್ನೈ: ಸಾಮಾನ್ಯವಾಗಿ ವೇಶ್ಯಾವಾಟಿಕೆ ಅಡ್ಡಾಗಳ ಮೇಲೆ ದಾಳಿ ಮಾಡಿದಾಗ ಗ್ರಾಹಕರ ಜೊತೆಗೆ ಲೈಂಗಿಕ ಕಾರ್ಯಕರ್ತರನ್ನೂ ಬಂಧಿಸಲಾಗುತ್ತದೆ. ಆದರೆ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ.

ಅರ್ಜಿಯೊಂದರ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸದಂತೆ ಆದೇಶ ನೀಡಿದೆ.

ವೇಶ್ಯಾವಾಟಿಕೆ ಎನ್ನುವುದು ತಪ್ಪಲ್ಲ. ಆದರೆ ಅಂತಹ ಅಡ್ಡಾಗಳನ್ನು ನಡೆಸುವುದು ಅಪರಾಧ. ಹೀಗಾಗಿ ಯಾವುದೇ ಬಲವಂತವಿಲ್ಲದೇ ಸ್ವ ಇಚ್ಛೆಯಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದರೆ ಅಂತಹವರನ್ನು ಬಂಧಿಸಬಾರದು ಎಂದು ಕೋರ್ಟ್ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ