ಪಾಸ್ ಪೋರ್ಟ್ ಪರೀಕ್ಷೆ ಸಂದರ್ಭ ಮಹಿಳೆಯನ್ನು ತಬ್ಬಿಕೊಂಡ ಪೊಲೀಸ್ !

ಶುಕ್ರವಾರ, 13 ಜುಲೈ 2018 (12:01 IST)
ನವದೆಹಲಿ: ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ಮನೆಗೆ ಬಂದು ಪರಿಶೀಲನೆ ನಡೆಸುವುದು ಮಾಮೂಲಿ.

ಆದರೆ ಗಾಝಿಯಾಬಾದ್ ನಲ್ಲಿ ಪೊಲೀಸ್ ಪೇದೆಯೊಬ್ಬ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮಹಿಳಾ ಪತ್ರಕರ್ತರೊಬ್ಬರ ಮನೆಗೆ ಹೋಗಿ ಪರೀಕ್ಷೆ ನೆಪದಲ್ಲಿ ತಬ್ಬಿಕೊಂಡು ಅಶ್ಲೀಲ ವರ್ತನೆ ಮಾಡಿರುವ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರ ಪತ್ರಕರ್ತೆಗೆ ಇಂತಹದ್ದೊಂದು ಅನುಭವವಾಗಿದೆಯಂತೆ. ಈ ಕುರಿತು ಆ ಮಹಿಳಾ ಪತ್ರಕರ್ತೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಪರಿಣಾಮವಾಗಿ ಇದೀಗ ಪೊಲೀಸ್ ಪೇದೆಯನ್ನು ಅಮಾನತಗೊಳಿಸಲಾಗಿದ್ದು, ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥರು ತನಿಖೆಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ