ಛೋಟಾ ರಾಜನ್ ಹತ್ಯೆ ಸಂಚು ವಿಫಲ: ನಾಲ್ವರು ಆರೋಪಿಗಳ ಬಂಧನ

ಶುಕ್ರವಾರ, 10 ಜೂನ್ 2016 (12:16 IST)
ತಿಹಾರ್ ಜೈಲಿನಲ್ಲಿ ಬಂಧಿತನಾಗಿರುವ ಛೋಟಾ ರಾಜನ್ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ದೆಹಲಿ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ದಾವೂದ್ ಬಣದ ಛೋಟಾ ಶಕೀಲ್ ಆದೇಶದ ಮೇರೆಗೆ ಆರೋಪಿಗಳು ರಾಜನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.
 
ಶಾರ್ಪ್ ಶೂಟರ್‌ಗಳಾದ ರಾಬಿನ್ಸನ್, ಜುನೈದ್, ಯುನೂಸ್ ಮತ್ತು ಮನೀಶ್ ಎನ್ನುವವರನ್ನು ಜೂನ್ 3 ರಂದು ಬಂಧಿಸಲಾಗಿದ್ದು ಏಳಉ ದಿನಗಳ ವಿಚಾರಣೆಯ ನಂತರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿಗಳ ಫೋನ್ ಕರೆಗಳನ್ನು ಕದ್ದಾಲಿಸಿದ ದೆಹಲಿ ವಿಶೇಷ ಪೊಲೀಸ್ ತಂಡ, ಆರೋಪಿಗಳು ನಿರಂತರವಾಗಿ ಶಕೀಲ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಅರವಿಂದ್ ದೀಪ್ ಹೇಳಿದ್ದಾರೆ. 
 
ಛೋಟಾ ರಾಜನ್‌ನನ್ನು ಕೋರ್ಟ್ ವಿಚಾರಣೆಗಾಗಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಆರೋಪಿಗಳಿಂದ ರಿವಾಲ್ವರ್ ಮತ್ತು ಸಜೀವ ಗುಂಡುಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು. 
 
ಛೋಟಾ ರಾಜನ್‌ನನ್ನು ಬಂಧನದಲ್ಲಿಡಲಾದ ತಿಹಾರ್ ಜೈಲಿಗೆ ಬಂಧಿತ ಆರೋಪಿಗಳನ್ನೂ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ 27 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಛೋಟಾ ರಾಜನ್‌ನನ್ನು ಆಸ್ಟ್ರೇಲಿಯಾ ಅಧಿಕಾರಿಗಳ ನೀಡಿದ ಮಾಹಿತಿ ಮೇರೆಗೆ ಇಂಡೋನೇಷ್ಯಾದ ಬಾಲಿ ನಗರದಲ್ಲಿ ಬಂಧಿಸಲಾಗಿತ್ತು. ಅಲ್ಲಿಂದ ಭಾರತಕ್ಕೆ ಕರೆತರಲಾಗಿತ್ತು.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ